

ಅಳ್ನಾವರ: ಸದಸ್ಯರ ಹಾಗೂ ಗ್ರಾಹಕರ ವಿಶ್ವಾಸಿಕ ವ್ಯವಹಾರಗಳಿಂದ ಬ್ಯಾಂಕಿನ ಆರ್ಥಿಕತೆಯು ಪ್ರಗತಿ ಪಥದಲ್ಲಿ ಸಾಗುತ್ತಿದೆ ಎಂದು ಅರ್ಬನ್ ಬ್ಯಾಂಕ್ ಅಧ್ಯಕ್ಷ ಎಸ್.ಜಿ. ಜಕಾತಿ ಹೇಳಿದರು.
ಇತ್ತೀಚೆಗೆ ಆಯೋಜಿಸಿದ್ದ ಅರ್ಬನ್ ಬ್ಯಾಂಕಿನ 67ನೇ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು. ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶನದಲ್ಲಿ ಕೆಲವು ಕಠಿಣ ನಿಯಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಹಾಗೂ ಸಿಬ್ಬಂದಿಯ ಪ್ರಾಮಾಣಿಕ ಕಾರ್ಯದಿಂದ ಈ ಬಾರಿ ಬ್ಯಾಂಕ್ 1.5 ಕೋಟಿ ರೂ. ಲಾಭ ಗಳಿಸಿದೆ. 4591 ಸದಸ್ಯರ 2.43 ಕೋಟಿ ಷೇರು ಬಂಡವಾಳ ಹಾಗೂ 73.81 ಕೋಟಿ ರೂ. ಠೇವಣಿ ಸಂಗ್ರಹದಿಂದ 55.53 ಕೋಟಿ ರೂ. ಸಾಲ ಮತ್ತು ಮುಂಗಡಗಳನ್ನು ನೀಡಿ ಪ್ರಸಕ್ತ ವರ್ಷದ ಲಾಭಾಂಶವನ್ನು ಶೇ. 15 ರಷ್ಟು ನೀಡಲು ತೀರ್ಮಾನಿಸಲಾಗಿದೆ ಎಂದರು.
ಉಪಾಧ್ಯಕ್ಷ ರೂಪೇಶ ಗುಂದಕಲ, ಮಧು ಬಡಸ್ಕರ, ಎ.ವಿ. ಉಡುಪಿ, ಜೆ. ಆರ್. ತೊಲಗಿ, ರಾಜು ಅಷ್ಟೇಕರ, ಎಂ.ಆರ್. ಗಾಣಿಗೇರ, ಎನ್.ಪಿ. ಹಂಜಗಿ, ಎಫ್.ಎಸ್. ಮೇದಾರ, ಪಿ.ಎಸ್. ಹೊಸಕೇರಿ, ಉದಯ ಗಡಕರ, ಎಂ.ಬಿ. ತೇಗೂರ, ಸಂಧ್ಯಾ ಅಂಬಡಗಟ್ಟಿ, ವರ್ಷಾ ತೇಗೂರ, ಎ.ಎಸ್. ಹಿರೇಮಠ, ಪಿ.ಜಿ. ಮಟ್ಟಿ ಇದ್ದರು. ಸಿಇಒ ರವಿ ಪಟ್ಟಣ ವಾರ್ಷಿಕ ವರದಿ ಮಂಡಿಸಿದರು. ಸಿ.ಕೆ. ಪೊಕಾರ ಸ್ವಾಗತಿಸಿದರು. ಎಸ್.ಎಸ್. ಸೊಪ್ಪಿನ ವಂದಿಸಿದರು.