ಬ್ಯಾಂಕನ ಯೋಜನೆ ಪಡೆದು ಆರ್ಥಿಕವಾಗಿ ಸಬಲರಾಗಿ

alvandi
ಅಳವಂಡಿ ಎಸ್‌ಬಿಐ ಬ್ಯಾಂಕನಲ್ಲಿ ಸಾರ್ವಜನಿಕರಿಗೆ ಸಿಗುವ ಸಾಲ ಸೌಲಭ್ಯದ ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಶಾಖಾ ವ್ಯವಸ್ಥಾಪಕ ಸುನೀಲ ಐಹೊಳೆ, ಸಿಬ್ಬಂದಿಗಳಾದ ಏಸು ರತ್ನಂ, ಶ್ರೀರಾಮಲು, ಶರಣಪ್ಪ, ಸತ್ಯಪ್ಪ, ಆರಿಪ್, ದೇವಪ್ಪ, ಶರಣಪ್ಪ ಇತರರು ಇದ್ದರು.
Published on

ಅಳವಂಡಿ: ಸಾರ್ವಜನಿಕರು ಕೃಷಿ ಸಾಲದ ಹೊರತಾಗಿಯು ಇತರ ಕೃಷಿಯೇತರ ಚಟುವಟಿಕೆಗೆ ಬ್ಯಾಂಕನಿಂದ ಸಾಲ ಪಡೆದು ಯಶಸ್ಸು ಗಳಿಸಿ ಆರ್ಥಿಕವಾಗಿ ಸಬಲರಾಗಬೇಕು ಎಂದು ಶಾಖಾ ವ್ಯವಸ್ಥಾಪಕ ಸುನೀಲ ಐಹೊಳೆ ತಿಳಿಸಿದರು.

ಗ್ರಾಮದ ಭಾರತೀಯ ಸ್ಟೇಟ್ ಬ್ಯಾಂಕನ ಸ್ಥಳೀಯ ಶಾಖೆಯಲ್ಲಿ ಬ್ಯಾಂಕಿನಿಂದ ಸಾರ್ವಜನಿಕರಿಗೆ ಸಿಗುವ ಸಾಲ ಸೌಲಭ್ಯದ ಬಗ್ಗೆ ನಡೆದ ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಬ್ಯಾಂಕನ ಮಾರ್ಗ ಸೂಚಿಯಂತೆ ಅಗತ್ಯ ದಾಖಲೆ ಪತ್ರಗಳನ್ನು ಬ್ಯಾಂಕಗೆ ನೀಡಿ ಉದ್ದಿಮೆ ನಡೆಸಲು ಸಾಲ ಪಡೆಯಬಹುದು, ಹೈನುಗಾರಿಕೆ, ಅರಣ್ಯ, ತೋಟಗಾರಿಕೆ, ಗೋದಾಮು ನಿರ್ಮಿಸಲು, ದಾಸ್ತಾನು ಸಾಲ ಸೌಲಭ್ಯ ನೀಡಲಾಗುವದು ಎಂದರು.

ಕಾರಣ ಗ್ರಾಹಕರು ಬ್ಯಾಂಕ್‌ಗೆ ಬೇಟಿ ನೀಡಿ ಅಗತ್ಯ ಮಾಹಿತಿ ಪಡೆಯಬೇಕು. ಬ್ಯಾಂಕಗಳು ಗ್ರಾಮೀಣ ಅಭಿವೃದ್ದಿಗೆ ಬದ್ದವಾಗಿದ್ದು ಗ್ರಾಹಕರು ಉಪಯೋಗ ಪಡೆದುಕೊಂಡು ಅಭಿವೃದ್ದಿ ಹೊಂದಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net