ಅಡವಿಟ್ಟ ಚಿನ್ನ ಕೊಡಲ್ಲ ಎಂದ ಅಧಿಕಾರಿ; ಬ್ಯಾಂಕ್​ ಎದುರೇ ವಿಷ ಕುಡಿಯಲು ಮುಂದಾದ ರೈತ

Bank F
Published on

ವಿಜಯನಗರ: ಅಡವಿಟ್ಟ ಚಿನ್ನವನ್ನು ವಾಪಸ್ ನೀಡಲು ತಕರಾರು ತೆಗೆದ ಬ್ಯಾಂಕ್ ಅಧಿಕಾರಿಗಳಿಂದಾಗಿ ಬೇಸತ ರೈತರೊಬ್ಬರು ಬ್ಯಾಂಕ್ ಎದುರೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣವೊಂದು ನಡೆದಿದೆ.

ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಹೊಳಲು ಗ್ರಾಮದ ರಾಷ್ಟ್ರೀಕೃತ ಬ್ಯಾಂಕ್​ವೊಂದರ ಮುಂದೆ ಈ ಘಟನೆ ನಡೆದಿದೆ. ಬ್ಯಾಂಕ್ ಅಧಿಕಾರಿಗಳ ವರ್ತನೆಗೆ ಬೇಸತ್ತ ರೈತ ಯಲ್ಲಪ್ಪ ಎಂಬವರು ಆತ್ಮಹತ್ಯೆಗೆ ಯತ್ನಿಸಿದವರು.

ರೈತ ಯಲ್ಲಪ್ಪ 2021ರ ಮೇ ತಿಂಗಳಲ್ಲಿ ಜಮೀನು ನಿರ್ವಹಣೆಗಾಗಿ 36 ಗ್ರಾಂ ಚಿನ್ನವನ್ನು ಅಡವಿಟ್ಟು 92 ಸಾವಿರ ಸಾಲ ಪಡೆದಿದ್ದರು. ಕಬ್ಬು ಮಾರಾಟ ಮಾಡಿದ ಹಣ ಖಾತೆಗೆ ಜಮಾ ಆಗಿದ್ದರಿಂದ ಸಾಲಕ್ಕೆ ಹಣ ಜಮೆ ಮಾಡಿ ಬಂಗಾರ ವಾಪಸ್ ನೀಡುವಂತೆ ಕೇಳಿದ್ದರು.

ಆದರೆ ಅಡವಿಟ್ಟ ಚಿನ್ನ ವಾಪಸ್ ಪಡೆಯಲು ಕಳೆದೊಂದು ತಿಂಗಳಿನಿಂದ ಅಲೆಯುತ್ತಿದ್ದರೂ ಬ್ಯಾಂಕ್​ನವರು ಅದನ್ನು ಮರಳಿಸಿಲ್ಲ. ಅಡವಿಟ್ಟ ಚಿನ್ನ ವಾಪಸ್ ಕೊಡಬೇಕಿದ್ದರೆ 25 ವಿಮೆ ಮಾಡಿಸಬೇಕು, ಇಲ್ಲದಿದ್ದರೆ ಚಿನ್ನ ಕೊಡುವುದಿಲ್ಲ ಎಂದು ಬ್ಯಾಂಕ್​ ಅಧಿಕಾರಿ ಬೆದರಿಕೆ ಹಾಕಿದ್ದು, ನೊಂದ ಯಲ್ಲಪ್ಪ ಬ್ಯಾಂಕ್ ಮುಂದೆಯೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಸ್ಥಳೀಯರು ತಡೆದು ಮೇಲಧಿಕಾರಿಗಳಿಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net