ಹೊಳೆನರಸೀಪುರದಲ್ಲಿ ಮರ್ಕೆಂಟೈಲ್ ಬ್ಯಾಂಕ್

22 bank
Published on

ಹೊಳೆನರಸೀಪುರ: ಪಟ್ಟಣದ ಕೋಟೆ ಮುಖ್ಯರಸ್ಥೆಯ ಉತ್ತರಾದಿ ಮಠದ ಎದುರು ಸಿಂಡಿಕೇಟ್ ಬ್ಯಾಂಕ್ ಇದ್ದ ಕಟ್ಟಡದಲ್ಲಿ ತಮಿಳುನಾಡು ಮರ್ಕೆಂಟೈಲ್ ಬ್ಯಾಂಕ್‌ನ ಶಾಖಾ ಕಚೇರಿ ಸೋಮವಾರದಿಂದ ಕಾರ್ಯಾರಂಭ ಮಾಡಿದೆ.
ಬ್ಯಾಂಕ್ ಕಾರ್ಯಾರಂಭಕ್ಕೆ ಜ್ಯೋತಿ ಬೆಳಗಿಸಿ ಚಾಲನೆ ನೀಡಿದ ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ ಮಾತನಾಡಿ, ಪಟ್ಟಣದಲ್ಲಿ ಅಗತ್ಯಕ್ಕೆ ತಕ್ಕಷ್ಟು ಬ್ಯಾಂಕ್‌ಗಳು ಇರಲಿಲ್ಲ. ಕೆಲವು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಜನರಿಗೆ ತ್ವರಿತ ಸೇವೆ ಸಿಗುತ್ತಿರಲಿಲ್ಲ. ಈ ಬ್ಯಾಂಕ್ ಉದ್ಘಾಟನೆ ಆಗಿರುವುದರಿಂದ ಜನರಿಗೆ ಅನುಕೂಲ ಆಗಲಿದೆ ಎಂದರು.
ಹಿರಿಯ ವಕೀಲ ಆರ್.ಡಿ. ರವೀಶ್ ಮಾತನಾಡಿ, ತಮಿಳುನಾಡು ಮರ್ಕೆಂಟೈಲ್ ಬ್ಯಾಂಕ್ ಒಂದು ಷಡ್ಯೋಲ್ ಬ್ಯಾಂಕ್ ಆಗಿದ್ದು ಇದು ಸಂಪೂರ್ಣ ರಿಸರ್ವ್ ಬ್ಯಾಂಕ್ ನೀತಿ ನಿಯಮಗಳ ಅನುಸಾರ ನಡೆಯುತ್ತದೆ. ಇಲ್ಲಿಯೂ ಕೂಡ ಗ್ರಾಹಕರಿಗೆ ಎಲ್ಲ ರೀತಿಯ ಸೇವೆಗಳು ದೊರೆಯಲಿವೆ. ಜನರು ಈ ಶಾಖೆಯಲ್ಲಿ ಖಾತೆ ತೆರೆದು ತ್ವರಿತ ಸೇವೆ ಪಡೆಯಬಹುದು ಎಂದರು.
ಬ್ಯಾಂಕ್‌ನ ವಿಭಾಗೀಯ ಹಿರಿಯ ಅಧಿಕಾರಿ ವಸಂತನ್ ಮಾತನಾಡಿ, 1921ರಲ್ಲಿ ತಮಿಳುನಾಡಿನಲ್ಲಿ ತಮಿಳುನಾಡು ಮಕೆರ್ಂಟೈಲ್ ಬ್ಯಾಂಕ್ ಪ್ರಾರಂಭವಾಗಿದ್ದು, ಕಳೆದ 104 ವರ್ಷಗಳಿಂದ ನಮ್ಮ ಬ್ಯಾಂಕ್, ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಾ ನಿರಂತರ ಬೆಳೆಯುತ್ತಿದೆ. ನಮ್ಮದು ಷೆಡ್ಯೂಲ್ ಬ್ಯಾಂಕ್ ಆಗಿದ್ದು ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಸಿಗುವ ಎಲ್ಲ ಸೇವೆಗಳೂ ನಮ್ಮಲ್ಲಿ ಲಭ್ಯ ಇದೆ. ಒಟ್ಟು 542 ಶಾಖೆಗಳಿದ್ದು, ಎಲ್ಲ ಶಾಖೆಗಳೂ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಾ ಬೆಳೆಯುತ್ತಿದೆ. ಕರ್ನಾಟಕ ಸರ್ಕಾರ ಕೂಡ ನಮ್ಮ ಬ್ಯಾಂಕ್‌ನಲ್ಲಿ ಠೇವಣಿ ಇರಿಸಿದೆ ಎಂದು ವಿವರಿಸಿದರು. ನಮ್ಮಲ್ಲಿ ಹಿರಿಯ ನಾಗರಿಕರ ಠೇವಣಿಗೆ ಶೇ.8 ಬಡ್ಡಿ ದೊರೆಯಲಿದೆ ಎಂದರು.
ಬ್ಯಾಂಕ್‌ನ ವ್ಯವಸ್ಥಾಪಕ ಜಯಬಾಲಾಜಿ ಸೇವೆಯೇ ನಮ್ಮ ಧ್ಯೇಯ. ನಾವು ನಮ್ಮ ಬ್ಯಾಂಕ್‌ನಲ್ಲಿ ಗ್ರಾಹಕರಿಗೆ ಅತ್ಯುತ್ತಮ ಹಾಗೂ ತ್ವರಿತ ಸೇವೆ ನೀಡುತ್ತೇವೆ. ನಮ್ಮಲ್ಲಿ ಖಾತೆ ತೆರೆಯಿರಿ ಎಂದರು. ವಕೀಲೆ ಹರಿಣಾಕ್ಷಿ, ಸಂಜೀವ ಸೇರಿದಂತೆ ನಗರದ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net