ಹೊರಗುತ್ತಿಗೆ ನೇಮಕಾತಿಗೆ ವಿರೋಧ, ಬ್ಯಾಂಕ್ ನೌಕರರ ಸಭೆಯಲ್ಲಿ ಒತ್ತಾಯ

IMG_20231028_211106_475.jpg
Published on

ಹುಬ್ಬಳ್ಳಿ: ಇಲ್ಲಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಕರ್ನಾಟಕ ಪ್ರದೇಶ ಬ್ಯಾಂಕ್ ನೌಕರರ ಒಕ್ಕೂಟದ ವತಿಯಿಂದ ಶನಿವಾರ ಹುಬ್ಬಳ್ಳಿ ಧಾರವಾಡ ಬ್ಯಾಂಕ್ ನೌಕರರ ಸಂಘದ ಸಭೆ ಏರ್ಪಡಿಸಲಾಗಿತ್ತು.

ಸಭೆಯಲ್ಲಿ ಸದಸ್ಯರು ಮಾತನಾಡಿ, ಬ್ಯಾಂಕ್ ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಯಂ ನೇಮಕಾತಿಗಾಗಿ ಒತ್ತಾಯಿಸಿದರು. ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿಯನ್ನು ವಿರೋಧಿಸಿದರು.

ಒಕ್ಕೂಟದ ಉಪಾಧ್ಯಕ್ಷ ವಿನ್ಸೆಂಟ್ ಡಿಸೋಜ, ಸಂಘಟನಾ ಕಾರ್ಯದಶಿರ್ ಎಂ. ಪದ್ಮನಾಭನ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೌಕರರ ಸಂಘದ ಪ್ರಧಾನ ಕಾರ್ಯದಶಿರ್ ರಘುರಾಮ್ ಬಲ್ಲಾಳ್, ಹುಬ್ಬಳ್ಳಿ ಧಾರವಾಡ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದಶಿರ್ ಸ್ಟೀಫನ್ ಜಯಚಂದ್ರ, ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net