

ಮಂಡ್ಯ: ನಗರದ ಹೊರವಲಯದ ವಿ.ಸಿ ಫಾರ್ಮ್ ಗೇಟ್‌ನಲ್ಲಿ ಬೈಕ್‌ನಿಂದ ಆಯತಪ್ಪಿ ಬಿದ್ದು ಯುವಕ ಮೃತಪಟ್ಟಿದ್ದಾನೆ. ತಾಲೂಕಿನ ದ್ಯಾಪಸಂದ್ರ ಗ್ರಾಮದ ಕಾಂಗ್ರೆಸ್ ಮುಖಂಡ ಶಂಕರಲಿಂಗೇಗೌಡ ಮತ್ತು ಶ್ರುತಿ ದಂಪತಿ ಪುತ್ರ ರೋಹಿತ್(24) ಮೃತ. ಈತ ಮೈಸೂರಿನ ಖಾಸಗಿ ಬ್ಯಾಂಕ್‌ನ ಉದ್ಯೋಗಿಯಾಗಿದ್ದು, ಕೆಲಸ ಮುಗಿಸಿಕೊಂಡು ಬೈಕ್‌ನಲ್ಲಿ ಗ್ರಾಮಕ್ಕೆ ತೆರಳುತ್ತಿದ್ದಾಗ ರಸ್ತೆ ಡುಬ್ಬದ ಬಳಿ ಬೈಕ್‌ನಿಂದ ಆಯತಪ್ಪಿ ಬಿದ್ದು ತಲೆ ಹಾಗೂ ದೇಹದ ಇತರೆ ಭಾಗಗಳಿಗೆ ತೀವ್ರ ಗಾಯಗಳಾಗಿತ್ತು. ಸುಮಾರು 45 ನಿಮಿಷ ರಕ್ತದ ಮಡುವಿನಲ್ಲಿ ಬಿದ್ದು ನರಳಾಡುತ್ತಿದ್ದರೂ ಯಾರೂ ಸಹ ಈತನ ನೆರವಿಗೆ ಬರಲಿಲ್ಲ.
ಇದೇ ಸಮಯದಲ್ಲಿ ಕಾರಿನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದ ಯುವಕರ ಗುಂಪು ರೋಹಿತ್‌ನನ್ನು ನೋಡಿ, ತಮ್ಮ ಕಾರಿನಲ್ಲೇ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾಸ್ಪತ್ರೆಗೆ ಕರೆತರುವಾಗ ಆಸ್ಪತ್ರೆಯ ಗೇಟ್ ಬಳಿ ಮೃತಪಟ್ಟಿದ್ದಾನೆ. ಈ ಸಂಬಂಧ ಮಂಡ್ಯ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.