

ಹುಬ್ಬಳ್ಳಿ: ಟ್ರೇಡಿಂಗ್ ಹಾಗೂ ಕ್ರಿಪ್ಕೊ ಕರೆನ್ಸಿಯಲ್ಲಿ ಹೂಡಿಕೆ ಮಾಡಿ ಲಾಭ ಗಳಿಸಬಹುದೆಂದು ನಂಬಿಸಿದ ವಂಚಕರು, ನಗರದ ಬ್ಯಾಂಕ್ ನೌಕರರೊಬ್ಬರಿಂದ ಆನ್‌ಲೈನ್ ಮೂಲಕ 39.42 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ನೌಕರ ಪಾರುಶ ಜಿ. ವಂಚನೆಗೆ ಒಳಗಾದವರು. ಮೊಬೈಲ್ ಫೋನ್ ನಂಬರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ ಹೂಡಿಕೆ ಬಗ್ಗೆ ತಿಳಿಸಿದ್ದಾನೆ. ನಂತರ ಟೆಲಿಗ್ರಾಂ ಮೂಲಕ ವಿವಿಧ ಬ್ಯಾಂಕ್ ಖಾತೆಯಿಂದ 39,42,450 ರೂ. ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾನೆ. ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.