ಗೇಮ್ ಆಡಲು ಬ್ಯಾಂಕ್ ನ 2.36 ಕೋಟಿ ರೂ. ದುರ್ಬಳಕೆ !

Rummy Fraud
Published on

ಹಾವೇರಿ: ಆನ್ ಲೈನ್ ಗೇಮ್ ಚಟಕ್ಕೆ ದಾಸನಾಗಿದ್ದ ನಗರದ ಬ್ಯಾಂಕ್ ವೊಂದರ ಡೆಪ್ಯುಟಿ ಮ್ಯಾನೇಜರ್ ಒಬ್ಬ ಬ್ಯಾಂಕ್ ನ 2.36 ಕೋಟಿ ರೂ. ದುರ್ಬಳಕೆ ಮಾಡಿಕೊಂಡ ಪ್ರಕರಣ ವರದಿಯಾಗಿದೆ.

ವಡವಿ ಗ್ರಾಮದ ವಿರೇಶ ಕಾಶಿಮಠ ಹಣ ದುರ್ಬಳಕೆ ಮಾಡಿಕೊಂಡ ಡೆಪ್ಯುಟಿ ಮ್ಯಾನೇಜರ್.

ಕಳೆದ ಆರು ತಿಂಗಳಿನಿಂದ ಬ್ಯಾಂಕ್ ಹಣ ಬಳಸಿಕೊಂಡು ಆನ್ ಲೈನ್ ಗೇಮ್ ಆಡುತ್ತಿದ್ದ ಬ್ಯಾಂಕ್ ಡೆಪ್ಯುಟಿ ಮ್ಯಾನೇಜರ್

ಸ್ನೇಹಿತರು, ಸಂಬಂಧಿಕರ ಬ್ಯಾಂಕ್ ಅಕೌಂಟ್ ಗೆ ಹಣ ವರ್ಗಾವಣೆ ಮಾಡಿಕೊಂಡು ಗೇಮ್ ಆಡುತ್ತಿದ್ದ.

ವಿಷಯ ಮ್ಯಾನೇಜರ್ ಗೆ ಗೊತ್ತಾಗಿ ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಬಳಿಕ ಸತ್ಯ ಬಯಲಾಗಿದೆ.

ಡೆಪ್ಯುಟಿ ಮ್ಯಾನೇಜರ್ ವಿರೇಶ ಕಾಶಿಮಠನನ್ನು ಬಂಧಿಸಿರುವ ಶಹರ ಠಾಣೆ ಪೊಲೀಸರು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net