ಬ್ಯಾಂಕ್‌ಗಳಿಗೆ ಸಿಸಿ ಕ್ಯಾಮರಾ ಕಡ್ಡಾಯವಾಗಿ ಅಳವಡಿಸಿ

250920 Yalaburga Bankers Security Meeting
ಯಲಬುರ್ಗಾದ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ತಾಲೂಕಿನ ಬ್ಯಾಂಕ್‌ಗಳ ಭದ್ರತೆ ಕುರಿತು ವ್ಯವಸ್ಥಾಪಕರ ಸಭೆಯಲ್ಲಿ ಪಿಎಸ್‌ಐ ಹನುಮಂತಪ್ಪ ತಳವಾರ ಮಾತನಾಡಿದರು.
Published on

ಯಲಬುರ್ಗಾ: ತಾಲೂಕಿನ ರಾಷ್ಟ್ರೀಕೃತ, ರಾಜ್ಯ ಮತ್ತು ಸಹಕಾರಿ ಸಂಘಗಳ ಬ್ಯಾಂಕ್‌ಗಳಿಗೆ ಕಡ್ಡಾಯವಾಗಿ ಸಿಸಿ ಕ್ಯಾಮರಾ ಅಳವಡಿಸಬೇಕು ಎಂದು ಪಿಎಸ್‌ಐ ಹನುಮಂತಪ್ಪ ತಳವಾರ್ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚಿಸಿದರು.

ಪಟ್ಟಣ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತಾಲೂಕಿನ ವಿವಿಧ ಬ್ಯಾಂಕ್‌ಗಳ ಭದ್ರತೆ ಕುರಿತು ವ್ಯವಸ್ಥಾಪಕರ ಸಭೆಯಲ್ಲಿ ಮಾತನಾಡಿದರು. ಎಸ್‌ಬಿಐ, ಕರ್ನಾಟಕ ಗ್ರಾಮೀಣ ಬ್ಯಾಂಕ್, ಆರ್‌ಡಿಸಿಸಿ ಹಾಗೂ ವಿವಿಧ ಸಹಕಾರ ಸಂಘಗಳ ಬ್ಯಾಂಕ್‌ಗಳ ಒಳಗೆ ಮತ್ತು ಹೊರಗೆ ನಾಲ್ಕು ದಿಕ್ಕುಗಳಿಗೆ ಸಿಸಿ ಕ್ಯಾಮರಾ ಅಳವಡಿಸಬೇಕು. ಅಲ್ಲದೆ ಸಿಸಿ ಟಿವಿಯಲ್ಲಿ ಕ್ರೋಢೀಕರಣವಾದ ಮಾಹಿತಿ, ವಿಡಿಯೋವನ್ನು ವೀಕ್ಷಿಸಬೇಕು. ಜತೆಗೆ ಭದ್ರತಾ ಸಿಬ್ಬಂದಿ ನಿಯೋಜಿಸಬೇಕು. ಬ್ಯಾಂಕ್‌ನಲ್ಲಿ ಕೆಲ ಅಪರಿಚಿತರು ಬರುವುದನ್ನು ಗಮನಿಸಬೇಕು. ಗ್ರಾಹಕರು ಬ್ಯಾಂಕಿನಲ್ಲಿ ಸಿಬ್ಬಂದಿಗೆ ತೊಂದರೆ ನೀಡಿದರೆ ತಕ್ಷಣವೇ ಪೊಲೀಸರ ಗಮನಕ್ಕೆ ತರಬೇಕು. ಎಸ್‌ಪಿ ಆದೇಶದಂತೆ ಎಲ್ಲ ಬ್ಯಾಂಕ್‌ಗಳ ವ್ಯವಸ್ಥಾಪಕರು ನಿಮಯ ಪಾಲಿಸಬೇಕು ಎಂದು ತಿಳಿಸಿದರು.

ಬೇವೂರು ಬ್ಯಾಂಕ್ ಕಳ್ಳತನ ಪ್ರಕರಣ: ತಾಲೂಕಿನ ಬೇವೂರಿನ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಕಳೆದ ಎರಡು ದಿನಗಳ ಹಿಂದೆ 1.45 ಕೋಟಿ ರೂ. ಕಳ್ಳತನವಾಗಿದ್ದು, ಮುಂಜಾಗ್ರತೆ ಕ್ರಮವಾಗಿ ಎಲ್ಲರೂ ಕಟ್ಟುನಿಟ್ಟಾಗಿ ನಿಯಮ ಪಾಲಿಸಬೇಕು. ಪೊಲೀಸ್ ಇಲಾಖೆ ಸಹಕಾರ ಯಾವಾಗಲೂ ಇರುತ್ತದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net