ಬ್ಯಾಂಕ್ ಖಾತೆ ಹ್ಯಾಕ್ ಮಾಡಿ ಲಕ್ಷಾಂತರ ರೂ. ವಂಚನೆ

cen police station
Published on

ಶಿವಮೊಗ್ಗ: ಬ್ಯಾಂಕ್ ಖಾತೆ ಹ್ಯಾಕ್ ಮಾಡಿ ವಿದೇಶ ಪ್ರವಾಸದಲ್ಲಿದ್ದ ವ್ಯಕ್ತಿಯೊಬ್ಬರ ಎರಡು ಬ್ಯಾಂಕ್ ಖಾತೆಗಳಿಂದ 3.26 ಲಕ್ಷ ರೂ. ವರ್ಗಾವಣೆ ಮಾಡಿಕೊಂಡು ವಂಚಿಸಲಾಗಿದೆ.

ಶಿವಮೊಗ್ಗದ ವ್ಯಕ್ತಿ ವಂಚನೆಗೆ ಒಳಗಾಗಿದ್ದು, ತಂದೆಯ ಮುಖಾಂತರ ಶಿವಮೊಗ್ಗದ ಬ್ಯಾಂಕ್‌ನಲ್ಲಿ ಪಾಸ್ ಬುಕ್ ಎಂಟ್ರಿ ಮಾಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಶಿವಮೊಗ್ಗದ ವ್ಯಕ್ತಿಯ ಎಸ್‌ಬಿಐ ಬ್ಯಾಂಕ್ ಖಾತೆಯಿಂದ ಐದು ಬಾರಿ 84,500 ರೂ. ವರ್ಗಾಯಿಸಿಕೊಳ್ಳಲಾಗಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಖಾತೆಯಿಂದ 2.41 ಲಕ್ಷ ರೂ. ಅನ್ನು ಬೇರೊಂದು ಖಾತೆ ವರ್ಗಾವಣೆ ಮಾಡಿಕೊಂಡಿರುವುದು ಗೊತ್ತಾಗಿದೆ. ಹಣ ವರ್ಗಾವಣೆಯಾದ ದಿನದ ಹಿಂದಿನ ದಿನ ವ್ಯಕ್ತಿಗೆ ಹಲವು ಸ್ಪ್ಯಾಮ್ ಕಾಲ್ ಬಂದಿದ್ದವು ಎನ್ನಲಾಗಿದ್ದು, ಈ ಸಂಬಂಧ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net