ಬ್ಯಾಂಕ್​ ಖಾತೆಯಿಂದ 2.50 ಲಕ್ಷ ರೂ. ಮೋಸದಿಂದ ವರ್ಗಾವಣೆ

Crime Logo
Published on

ರಾಣೆಬೆನ್ನೂರ: ಬ್ಯಾಂಕ್​ ಖಾತೆಯಿಂದ ಆನ್​ಲೈನ್​ ಮೂಲಕ 2.50 ಲಕ್ಷ ರೂ.ಅನ್ನು ಯಾವುದೋ ಅಪರಿಚಿತ ವ್ಯಕ್ತಿ ಬೇರೆ ಖಾತೆಗೆ ವರ್ಗಾಯಿಸಿಕೊಂಡು ಮೋಸ ಮಾಡಿದ ಕುರಿತು ಇಲ್ಲಿಯ ಶಹರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ನಂದಿಹಳ್ಳಿಯ ತಿಪ್ಪೇಶ ಶಂಕ್ರಪ್ಪ ಸರ್ವಂದ (20) ಎಂಬುವರ ಖಾತೆಯಿಂದ ಹಣ ವರ್ಗಾಯಿಸಿಕೊಂಡಿರುವುದು.
ಇವರ ಬ್ಯಾಂಕ್​ ಖಾತೆಗೆ ಲಿಂಕ್​ ಇರುವ ಮೊಬೈಲ್​ಗೆ ಮೇಲಿಂದ ಮೇಲೆ 14 ಮೇಸೆಜ್​ಗಳು ಬಂದಿವೆ. ಅವುಗಳನ್ನು ತೆರೆದು ನೋಡಿದಾಗ ಹಣ ವರ್ಗಾವಣೆ ಆಗಿರುವ ಬಗ್ಗೆ ತಿಳಿದು ಬಂದಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net