

ಹುಬ್ಬಳ್ಳಿ: ಇಲ್ಲಿಯ ಗೋಕುಲ ರಸ್ತೆ ಬಂಜಾರಾ ಕಾಲನಿಯ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಶನಿವಾರ ನೋಟ್ ಬುಕ್, ಬ್ಯಾಗ್, ಜಾಮೆಟ್ರಿ ಬಾಕ್ಸ್ ಗಳನ್ನು ವಿತರಣೆ ಮಾಡಲಾಯಿತು.
ದಾನಿಗಳಾದ ಸಾಫ್ಟ್ ವೇರ್ ಇಂಜಿನಿಯರ್ ದೀಪಾ ಬಾಗೇವಾಡಿ, ಬಸವರಾಜ ಬಾಗೇವಾಡಿ ಅವರು, ಗುಣಮಟ್ಟದ ಶಿಕ್ಷಣ ಪಡೆದು ಮಕ್ಕಳು ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಬಂಜಾರಾ ಕಾಲನಿ ಸಂಸ್ಥಾಪಕ ಹಾಗೂ ಸಮಾಜದ ರಾಜ್ಯಾಧ್ಯಕ್ಷ ಪಾಂಡುರಂಗ ಪಮ್ಮಾರ, ಮಕ್ಕಳು ಶಿಕ್ಷಣದಿಂದ ವಂಚಿತರಾಗದೆ ವಿದ್ಯೆ ಪಡೆದು ಜವಾಬ್ದಾರಿಯುತ ನಾಗರಿಕರಾಗಬೇಕು ಎಂದರು.
ಎಸ್.ಡಿ.ಎಂ.ಸಿ. ಅಧ್ಯಕ್ಷ ಝೆಲಸಿಂಗ ರಾಠೋಡ, ಉಪಾಧ್ಯೆ ರೇಣುಕ ಲಮಾಣಿ, ಹಿರಿಯರಾದ ಯಮನೂರ ನಾಯಕ್, ಭೀಮಣ್ಣ ರಜಪುತ, ವೆಂಕಟೇಶ ಪಮ್ಮಾರ, ಬಸವರಾಜ ಲಮಾಣಿ, ಮುಂತಾದವರು ಭಾಗವಹಿಸಿದ್ದರು.
ಮುಖ್ಯ ಶಿಕ್ಷಕ ಶಿವಯೋಗಿ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾರುತಿ ನಾಗಾವಿ ಕಾರ್ಯಕ್ರಮ ನಿರೂಪಿಸಿದರು. ಶ್ವೇತಾ ದೊಡ್ಡಮನಿ ನಿರ್ವಹಿಸಿದರು. ಸುಜಾತ ದೇಸಾಯಿ ವಂದಿಸಿದರು.