ಬಂಜಾರಾ ಭವನದಲ್ಲಿ ದಸರಾ ಸಂಭ್ರಮ

IMG_20241013_202008_168-1.jpg
Published on

ಹುಬ್ಬಳ್ಳಿ: ಇಲ್ಲಿನ ಜೆ.ಸಿ. ನಗರದ ಬಂಜಾರಾ ಭವನದಲ್ಲಿ 17ನೇ ವರ್ಷದ ದಸರಾ ಮಹೋತ್ಸವ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಘಟಸ್ಥಾಪನೆ ಹಾಗೂ ತೀಜ ಹಾಕಿ ಸತತ 9 ದಿನ ದೀಪ ಬೆಳಗಿ ದೇವಿಗೆ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಲಾಯಿತು.

ಬಂಜಾರಾ ಕುಲಗುರು ಸಂತ ಶ್ರೀ ಸೇವಾಲಾಲ್ ಮಹಾರಾಜರ ಮಹಾ ಭೋಗ್ ಕಾರ್ಯಕ್ರಮ ನೆರವೇರಿಸಲಾಯಿತು. ಶ್ರೀ ಸೇವಾಲಾಲ್ ಮಹಾರಾಜರಿಗೆ ಬಿಳಿ ಧ್ವಜ (ಖಾಟಿ ) ಹಾಗೂ ಶ್ರೀ ಮಾರಿಕಾಂಬಾ ದೇವಿಗೆ ಕೆಂಪು ಧ್ವಜ (ಖಾಟಿ ) ಅರ್ಪಿಸಲಾಯಿತು.

ಶ್ರೀ ಮಾರಿಕಾಂಬಾ ದೇವಿಗೆ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಲಾಯಿತು. ಸಾವಿರಾರು ಭಕ್ತರು ದೇವಿಯ ಕೃಪೆಗೆ ಪಾತ್ರರಾದರು. ಅನ್ನ ಸಂತರ್ಪಣೆ ನೆರವೇರಿಸಲಾಯಿತು.

9 ದಿನಗಳ ಆರಾಧನೆ ನಂತರ ದಸರಾ ಅಂಗವಾಗಿ ಪೂಜಿಸಿದ ಘಟ ಸ್ಥಾಪನಾ ತೀಜ ಸಸಿಗಳನ್ನು ವಿಸರ್ಜನೆ ಮಾಡಲಾಯಿತು. ತೀಜ ಸಸಿಗಳಿಗೆ ನಿರುಣಿಸುವುದು ಮತ್ತು ಪ್ರತಿದಿನ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸುವುದು ನಿರಂತರ ನಡೆಯಿತು.

ಬನ್ನಿ ಹಬ್ಬದಂತೆ ತೀಜ ಸಸಿಗಳನ್ನು ಪರಸ್ಪರರು ಹಂಚಿಕೊಂಡು ಬಾಳು ಯಾವತ್ತು ಹಸಿರಾಗಲಿ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಪ್ರಾಥಿರ್ಸಿದರು. ಹಾಡು ಹಾಡುತ್ತಾ ಲಂಬಾಣಿ ವಿಶೇಷ ನೃತ್ಯ ಪ್ರದರ್ಶನ ಮಾಡಲಾಯಿತು.

ಸಮಾಜದ ಅಧ್ಯಕ್ಷ ಪಾಂಡುರಂಗ ಪಮ್ಮಾರ, ದಸರಾ ಬಂಜಾರರ ವಿಶಿಷ್ಟ ಹಬ್ಬವಾಗಿದ್ದು, ನಮ್ಮ ಕಲೆ, ಸಂಸತಿ, ಸಂಪ್ರದಾಯ ಉಳಿಸಿ ಬೆಳೆಸಲು ಪೂರಕವಾಗಿದೆ ಎಂದು ಹೇಳಿದರು.

ಕೃಷ್ಣಾಜಿ ಚವಾನ್, ಹರಿಲಾಲ್ ಪವಾರ, ಡಿ.ಬಿ. ನಾಯಕ, ಡಾ. ಭೋಜು ಪೂಜಾರ, ಪ್ರೊ. ಎಸ್.ಕೆ. ಪವಾರ, ಪ್ರೊ. ಲಾಲು ಲಮಾಣಿ, ಹೇಮಾವತಿ ನಾಯಕ್, ಹಾಮೇಶ ನಾಯಕ್, ವಿಷ್ಣು ರಾಠೋಡ, ಚಂದ್ರಶೇಖರ ನಾಯಕ, ಭೀಮಸಿಂಗ ಲಮಾಣಿ, ಸುನಂದಾ ಲಮಾಣಿ, ದೇವಸ್ಥಾನ ಅರ್ಚಕರು, ವೆಂಕಟೇಶ ಪಮ್ಮಾರ, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net