ಒಳಮೀಸಲಾತಿ, ವರ್ಗೀಕರಣ ವಿರೋಽಸಿ ಪ್ರತಿಭಟನೆ

25 Dwd 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಒಳಮೀಸಲಾತಿ ಹಾಗೂ ವರ್ಗೀಕರಣ ವಿರೋಽಸಿ ಕರ್ನಾಟಕ ರಾಜ್ಯ ಕೊರಮ, ಕೊರಚ, ಭೋವಿ (ವಡ್ಡರ), ಬಂಜಾರಾ (ಲಂಬಾಣಿ), ಭಜಂತ್ರಿ, ಡೊಂಬರ ಮೀಸಲಾತಿ ಸಂರಕ್ಷಣಾ ಹೋರಾಟ ಸಮಿತಿಯಿಂದ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಕೆಲ ಅಗೋಚರ ಹಾಗೂ ಅಂಚಿನ ಜಾತಿಗಳ ಸಮುದಾಯಗಳಿಗೆ ಒಳಮೀಸಲಾತಿ ಹಾಗೂ ವರ್ಗೀಕರಣ ಮಾರಕಗುತ್ತಿದೆ. ರಾಜ್ಯ ಸರ್ಕಾರ ಸೂಕ್ತ ಅಧ್ಯಯನ ಇಲ್ಲದೆ ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಜಾರಿಗೊಳಿಸಲು ಷಡ್ಯಂತ್ರ ನಡೆಸುತ್ತಿದೆ. 99 ಜಾತಿಗಳ ಅಡಿ ಬರುವ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯ ಸ್ಥಿತಿಗಳ ಪರಿಕಲ್ಪನೆ ಯಾವ ವರದಿಯಲ್ಲೂ ವ್ಯಕ್ತವಾಗಿಲ್ಲ. ಜಾತಿ ಜನಗಣತಿಯನ್ನು ಕೈಗೊಂಡ ನಂತರವೇ ವೈಜ್ಞಾನಿಕ ದತ್ತಾಂಶಗಳನ್ನು ಮುಂದಿಟ್ಟುಕೊAಡು ಒಳಮೀಸಲಾತಿ ಅನುಷ್ಠಾನ ಕುರಿತು ಸರ್ಕಾರ ಯೋಚಿಸಬೇಕು. ಇಲ್ಲದಿದ್ದರೆ ಯಾವುದೇ ಫಲಾಪೇಕ್ಷೆ ಇಲ್ಲದೆ ಹಿಂದಿನಿAದಲೂ ಕಾಂಗ್ರೆಸ್ ಬೆಂಬಲಿಸುತ್ತ ಬಂದಿರುವ 99 ಜಾತಿಗಳ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಆದ್ದರಿಂದ ಜಾತಿಗಣತಿ ಆಗುವವರೆಗೆ ಒಳಮೀಸಲಾತಿಯನ್ನು ಕೈಗೊಳ್ಳಬಾರದು ಎಂದು ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ರವಾನಿಸಿದರು.

ವೆಂಕಟೇಶ ಪಮ್ಮಾರ, ಗೋವಿಂದ ಪಮ್ಮಾರ, ಮಂಜುನಾಥ ಜಿ., ಚಂದ್ರಕಾ0ತ ನಾಯ್ಕ, ರಮೇಶ ಲಮಾಣಿ, ರಾಜು ರಾಠೋಡ, ಕೃಷ್ಣ ನಾಯ್ಕ, ನಾಗೇಶ ನಾಯ್ಕ, ರಾಮಪ್ಪ ಲಮಾಣಿ, ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net