ಬಾಂಗ್ಲಾ ಸರ್ಕಾರದ ನಡೆಗೆ ಆಕ್ರೋಶ

Ballari Protst
ಬಳ್ಳಾರಿಯ ಕೆಇಬಿ ವೃತ್ತದಲ್ಲಿ ಎಐಡಿಎಸ್‌ಒ ಪ್ರತಿಭಟನೆ ನಡೆಸಿತು. ಸಂಘದ ರಾಜ್ಯಾಧ್ಯಕ್ಷ ಕೆ.ಎಸ್.ಅಶ್ವಿನಿ, ಅಜಯ್ ಕಾಮತ್, ಹಣಮಂತ ಇತರರಿದ್ದರು.
Published on

ಬಳ್ಳಾರಿ: ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳ ಸಾವು ಖಂಡಿಸಿ ನಗರದ ಕೆಇಬಿ ವೃತ್ತದಲ್ಲಿ ಎಐಡಿಎಸ್‌ಒ ಪದಾಧಿಕಾರಿಗಳು ಭಾನುವಾರ ಪ್ರತಿಭಟನೆ ನಡೆಸಿದರು.

ಎಐಡಿಎಸ್‌ಒ ರಾಜ್ಯ ಉಪಾಧ್ಯಕ್ಷ ಅಭಯ್ ದಿವಾಕರ ಮಾತನಾಡಿ, ಬಾಂಗ್ಲಾದೇಶದಲ್ಲಿ ಕಳೆದ 20 ದಿನಗಳಿಂದ ಹೋರಾಟ ನಡೆಸುತ್ತಿರುವ ವಿದ್ಯಾರ್ಥಿಗಳ ಮೇಲೆ ಅಲ್ಲಿನ ಸರ್ಕಾರವು ಪೈಶಾಚಿಕ ದಾಳಿ ನಡೆಸುತ್ತಿದೆ. ಈವರೆಗೆ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಾವಿಗೀಡಗಿದ್ದಾರೆ.

ಸರ್ಕಾರವು ಪ್ರಜಾತಾಂತ್ರಿಕವಾಗಿ ಸಮಸ್ಯೆ ಬಗೆಹರಿಸುವ ಬದಲಾಗಿ ವಿದ್ಯಾರ್ಥಿಗಳ ಹೋರಾಟವನ್ನು ಹತ್ತಿಕ್ಕುತ್ತಿರುವುದು ಖಂಡನೀಯ. ವಿದ್ಯಾರ್ಥಿಗಳು ಕೇವಲ ಒಂದು ಬೇಡಿಕೆಗೆ ಹೋರಾಟ ಮಾಡುತ್ತಿಲ್ಲ. ಬದಲಾಗಿ ವ್ಯವಸ್ಥೆಯ ಲೋಪವನ್ನು ಬಯಲಿಗೆಳೆಯಲು ಧರಣಿ ನಡೆಸಲಾಗುತ್ತಿಲ್ಲ. ಎಲ್ಲ ಗಡಿಗಳನ್ನು ಮೀರಿ ಹುತಾತ್ಮ ವಿದ್ಯಾರ್ಥಿಗಳಿಗೆ ಗೌರವ ಸಲ್ಲಿಸುವುದು, ಹೋರಾಟಕ್ಕೆ ಬೆಂಬಲ ನೀಡುವುದು ನಮ್ಮ ಜವಾಬ್ದಾರಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net