ಬಾಂಗ್ಲಾ ಹಿಂಸಾಚಾರ ಖಂಡನೀಯ

Ksd_Protest
Published on

ಹುಕ್ಕೇರಿ: ಬಾಂಗ್ಲಾ ದೇಶದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ಹಿಂಸಾಚಾರ ಖಂಡಿಸಿ ಶ್ರೀರಾಮ ಸೇನಾ ಹುಕ್ಕೇರಿ ಘಟಕ ಸದಸ್ಯರು ಗುರುವಾರ ತಹಸೀಲ್ದಾರ್ ಕಾರ್ಯಾಲಯ ಬಳಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮಂಜುಳಾ ನಾಯಕ ಅವರಿಗೆ ಮನವಿ ಸಲ್ಲಿಸಿದರು.

ಬಾಂಗ್ಲಾ ದೇಶದ ಹಿಂದುಗಳ ಮನೆ, ದೇವಸ್ಥಾನ, ಮಹಿಳೆ, ಪುರುಷರ ಮೇಲೆ ದೌರ್ಜನ್ಯ ನಡೆಸುವ ಮೂಲಕ ಅಮಾನುಷವಾಗಿ ಕೊಲೆಗೈಯುತ್ತಿರುವುದು ಹಾಗೂ ಮಹಿಳೆಯರ ಮೇಲೆ ಅತ್ಯಾಚಾರವೆಸಗುತ್ತಿರುವುದು ಖಂಡನೀಯ. ಕೂಡಲೆ ಅಲ್ಲಿನ ಸೇನಾಧಿಕಾರಿಗಳು ಕ್ರಮ ಕೈಗೊಂಡು ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು. ಭಾರತ ಸರ್ಕಾರ ಮಧ್ಯ ಪ್ರವೇಶಿಸಿ ವಾತಾವರಣ ಶಾಂತಗೊಳಿಸಬೇಕು ಎಂದರು.

ವಿವೇಕ ಪುರಾಣಿಕ, ಶಿವಾಜಿ ಘಾಟಗೆ, ರಾಹುಲ್ ಅಂಕಲೆ, ಸುನೀಲ ಪೂಜೇರಿ, ಮಹಾಂತೇಶ ಹಿರೇಮಠ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net