ಕೋಲಾರದಲ್ಲಿ ಬಾಂಗ್ಲಾ ಗ್ಯಾಂಗ್​ ಕರಾಮತ್ತು: ಭಾರತ್​ ಪೇ ಹೆಸರಲ್ಲಿ ದುಬಾರಿ ಬೆಲೆಯ ಮೊಬೈಲ್​ ಫೋನ್​​ ಕದ್ದು ಪರಾರಿ

Bharath Pay
Published on

ಕೋಲಾರ: ಭಾರತ್ ಪೇ ಹೆಸರಿನ ಮೊಬೈಲ್ ಆಪ್ ಹಾಕಿಕೊಡುವ ನೆಪದಲ್ಲಿ ಬೆಲೆ ಬಾಳುವ ಮೊಬೈಲ್ ಫೋನ್​​ಗಳನ್ನು ಕದ್ದೊಯ್ದಿರುವ ಘಟನೆ ಕೋಲಾರ ನಗರದಲ್ಲಿ ನಡೆದಿದೆ.

ನಗರದಲ್ಲಿ ಬಾಂಗ್ಲಾ ಗ್ಯಾಂಗ್​ ಲಗ್ಗೆ ಇಟ್ಟಿರುವ ಬಗ್ಗೆ ಮಾಹಿತಿ ದೊರೆತಿದ್ದು, ದಿನದಲ್ಲೇ ನಗರದ ಮೂರ್ನಾಲ್ಕು ಅಂಗಡಿಗಳಲ್ಲಿ ಈ ಕೃತ್ಯವೆಸಗಿದ್ದಾರೆ.

ನಗರಕ್ಕೆ ಲಗ್ಗೆ ಇಟ್ಟಿರುವ ಚೋರರು ಮೊಬೈಲ್ ಆಪ್ ಇನ್ ಸ್ಟಾಲ್ ಮಾಡಿಕೊಡುವ ನೆಪದಲ್ಲಿ ಬೆಲೆಬಾಳುವ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದಾರೆ. ಖದೀಮರ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ರಥನ್ ಲೋಕ್ ಸ್ಟೀಲ್ಸ್, ಎಸ್.ಎಲ್.ವಿ ಸೂಪರ್ ಮಾರ್ಕೆಟ್, ಮೀನಾ ಕಂಪ್ಯೂಟರ್ಸ್ ಅಂಗಡಿಗಳಲ್ಲಿ ಕೃತ್ಯ ಎಸಗಿದ್ದಾರೆ.

ಮೊಬೈಲ್ ಕಸಿದುಕೊಂಡು ಹೋಗುವ ದೃಶ್ಯಗಳು ಅಂಗಡಿಗೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇನ್ನೂ ಈ ಬಗ್ಗೆ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net