ಬಂಗಾರು ಮಂಜುಳಾ ಅಧ್ಯಕ್ಷೆ

Published on

ಕೊಟ್ಟೂರು: ಉಜ್ಜಿನಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಮತ್ತು 12 ಸದಸ್ಯರ ಸ್ಥಾನಕ್ಕೆ ನೂರಕ್ಕೂ ಹೆಚ್ಚು ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಅತ್ಯಂತ ಬಿರುಸಿನ ಚುನಾವಣೆಗೆ ಕಣ ಸಿದ್ಧವಾಗಿತ್ತು.

ರಾಜಕೀಯ ಒಳನುಸುಳದಂತೆ ರಾಜಕಾರಣಿಗಳನ್ನು ದೂರವಿಟ್ಟು ಗ್ರಾಮದ ಪ್ರಮುಖರು ನಾಮಪತ್ರ ಸಲ್ಲಿಸಿದ ಎಲ್ಲರನ್ನೂ ಕರೆಯಿಸಿ ಸಭೆ ನಡೆಸಿದರು. ಸಂಘದ ಸದಸ್ಯರಾಗಲು ಇಚ್ಚಿಸುವವರು 2 ಲಕ್ಷ ರೂ. ಕೊಟ್ಟಲ್ಲಿ ಅವಿರೋಧವಾಗಿ ಆಯ್ಕೆಯಾಗಬಹುದು ಎಂಬ ಷರತ್ತು ಹಾಕಿದರು.

ಚುನಾವಣೆ ಯಾವುದೇ ಗದ್ದಲ ಗಲಾಟೆ ಇಲ್ಲದೆ 12 ಜನರಿಂದ 24 ಲಕ್ಷ ರೂ. ಸಂಗ್ರಹವಾಯಿತು. ಬಂಗಾರು ಮಂಜುಳಾ ಅಧ್ಯಕ್ಷರಾದರು. ಈ ಹಣವನ್ನು ಗ್ರಾಮದ ಆಂಜನೇಯ ದೇವಾಲಯನಿರ್ಮಾಣಕ್ಕೆ ಕಾಯ್ದಿರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net