ಬಂಗಾರಪೇಟೆ ಹೂವಿನ ಕರಗೋತ್ಸವ ಅದ್ದೂರಿ

karaga
Published on

ಬಂಗಾರಪೇಟೆ: ಪಟ್ಟಣದ ಶ್ರೀ ದ್ರೌಪತಾಂಬ ದೇವಿ ಹೂವಿನ ಕರಗ ಸಹಸ್ರಾರು ಭಕ್ತರ ಮಧ್ಯೆ ಶ್ರದ್ಧಾಭಕ್ತಿಯಿಂದ ನೆರವೇರಿತು.

ಏಳು ದಿನದ ಕರಗ ಮಹೋತ್ಸವದಲ್ಲಿ ಮಂಗಳವಾರ ರಾತ್ರಿ ಕರಗದ ಪೂಜಾರಿ ಕೃಷ್ಣಮೂರ್ತಿ ಅವರು ಧರ್ಮರಾಯಸ್ವಾಮಿ ದೇವಸ್ಥಾನದ ಗರ್ಭ ಗುಡಿಯಿಂದ ಮಲ್ಲಿಗೆ ಹೂವಿನಿಂದ ಅಲಂಕೃತಗೊಂಡಿದ್ದ ಹೂವಿನ ಕರಗ ಹೊತ್ತು ಹೊರಬರುತ್ತಿದ್ದಂತೆಯೇ ನೆರೆದಿದ್ದ ಭಕ್ತರು ಗೋವಿಂದ ನಾಮಸ್ಮರಣೆಯೊಂದಿಗೆ ಕರಗದ ಮೇಲೆ ಹೂವಿನ ಮಳೆಗೈದರು. ದೇವಸ್ಥಾನ ಪ್ರದಣೆ ಬಳಿಕ ಸಮೀಪದ ವಿಶೇಷ ವೇದಿಕೆ ಮೇಲೆ ಗಂಟೆಗೂ ಹೆಚ್ಚು ಸಮಯ ನೃತ್ಯ ಮಾಡಿದರು. ನಂತರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ ಸ್ವೀಕರಿದರು. ವೀರಕುಮಾರರು ಕತ್ತಿ ಹಿಡಿದು ಕರಗದೊಂದಿಗೆ ಹೆಜ್ಜೆ ಹಾಕಿದರು. ಸೇವಾಕರ್ತರು ಸಾರ್ವಜನಿಕರಿಗೆ ಅನ್ನದಾನ, ಪಾನಕ, ಮಜ್ಜಿಗೆ ವಿತರಿಸಿದರು.

ಕರಗದ ವೇದಿಕೆ ಕಾರ್ಯಕ್ರದಲ್ಲಿ ಮಾಜಿ ಸಂಸದ ಎಸ್​.ಮುನಿಸ್ವಾಮಿ, ಶಾಸಕ ಎಸ್​.ಎನ್​.ನಾರಾಯಣಸ್ವಾಮಿ, ಪುರಸಭೆ ಮಾಜಿ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಕಾರಹಳ್ಳಿ ನಾರಾಯಣಸ್ವಾಮಿ, ಚಿನ್ನವೆಂಕಟೇಶ್​, ಐತಾಂಡಹಳ್ಳಿ ಅಮರೇಶ್​ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net