

ಚಿಮ್ಮಡ: ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಬಂಗಾರೆವ್ವ ಜಾಲಿಕಟ್ಟಿ ಅವಿರೋಧವಾಗಿ ಆಯ್ಕೆಯಾದರು.
ಹಿಂದಿನ ಅಧ್ಯಕ್ಷೆ ಮಾಲಾ ಮೋಟಗಿ ವಿರುದ್ಧ ಕಳೆದ ತಿಂಗಳು ನಡೆದ ಸಭೆಯಲ್ಲಿ ಅವಿಶ್ವಾಸ ನಿರ್ಣಯದಲ್ಲಿ ಸೋಲಾದ ಪ್ರಯುಕ್ತ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ತೆರವಾದ ಸ್ಥಾನಕ್ಕೆ ಮಂಗಳವಾರ ಚುನಾವಣೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. 8ನೇ ವಾರ್ಡ್ ಸದಸ್ಯೆ ಬಂಗಾರೆವ್ವ ಜಾಲಿಕಟ್ಟಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರನ್ನೇ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ರಬಕವಿ-ಬನಹಟ್ಟಿ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಸಿದ್ದಪ್ಪ ಪಟ್ಟಿಹಾಳ ಘೋಷಿಸಿದರು.
ಗ್ರಾಪಂ ಮಾಜಿ ಅಧ್ಯಕ್ಷ ಶಂಕರ ಬಟಕುರ್ಕಿ, ಪ್ರಭು ಪಾಲಭಾವಿ, ಗುರಲಿಂಗಪ್ಪ ಪೂಜಾರಿ, ತಾಪಂ ಮಾಜಿ ಉಪಾಧ್ಯಕ್ಷ ಪ್ರಭು ಮುಧೋಳ, ಬಸವರಾಜ ಕುಂಚನೂರ, ವಿಜಯಕುಮಾರ ಪೂಜಾರಿ, ಗ್ರಾಪಂ ಸದಸ್ಯೆ ಮನೋಜ ಹಟ್ಟಿ, ಫೈಗಂಬರ ಮೋಪಗಾರ, ನಾಗಪ್ಪ ಆಲಕನೂರ, ಆನಂದ ಕವಟಿ, ರಮೇಶ ಮೇತ್ರಿ, ಕೇಶವ ವಂದಾಲ, ಮಹಾಂತೇಶ ಜಾಲಿಕಟ್ಟಿ, ಅವ್ವನಪ್ಪ ಮುಗಳಖೋಡ, ಬಾಳೇಶ ಬ್ಯಾಕೋಡ, ತುಕಾರಾಮ ದೊಡಮನಿ, ಪ್ರಕಾಶ ಪಾಟೀಲ, ಹಣಮಂತ ಬಜಂತ್ರಿ, ಅಭಿವೃದ್ಧಿ ಅಧಿಕಾರಿ ಶಿವಾನಂದ ಬಿರಾದಾರ, ಬಿರಾದಾರ ಉಪಾಧ್ಯಕ್ಷೆ ಪದ್ಮಾವತಿ ಪ್ರಭು ಬಜಂತ್ರಿ ಇತರರಿದ್ದರು.
ಗ್ರಾಪಂ ಅಧ್ಯಕ್ಷರ ಅವಿರೋಧ ಆಯ್ಕೆ ಹೊರಬೀಳುತ್ತಿದ್ದಂತೆ ಅವರ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ಬನಹಟ್ಟಿ ಠಾಣಾಧಿಕಾರಿ ಶಾಂತಾ ಹಳ್ಳಿ ಸೂಕ್ತ ಬಂದೋಬಸ್ ಏರ್ಪಡಿಸಿದ್ದರು. ಬೀಟ್ ಸಿಬ್ಬಂದಿ ಆರ್.ಬಿ. ಪೂಜೇರಿ, ಎ.ಐ. ಹುನ್ನೂರ ಉಪಸ್ಥಿತರಿದ್ದರು.