ಜನಸ್ನೇಹಿ ಕಾರ್ಯಗಳ ಜಾರಿಗೆ ತಂದ ಬಂಗಾರಪ್ಪ

ex cm bangarappa birthday in ediga bhavan
ಶಿವಮೊಗ್ಗ ಈಡಿಗರ ಭನವದಲ್ಲಿ ಮಾಜಿ ಸಿಎಂ ಎಸ್.ಬಂಗಾರಪ್ಪ ಅವರ ಜನ ದಿನ ಆಚರಿಸಲಾಯಿತು. ಡಾ. ಆರ್.ಶ್ರೀಧರ್ ಹುಲ್ತಿಕೊಪ್ಪ, ಪ್ರೊ. ಕಲ್ಹನ, ಜಿ.ಡಿ.ಮಂಜುನಾಥ ಮತ್ತಿತರರಿದ್ದರು.
Published on

ಶಿವಮೊಗ್ಗ: ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್, ಬಹರ್‌ಹುಕುಂ ಸಾಗುವಳಿ ಜಾರಿ ಸೇರಿ ಅನೇಕ ಜನಸ್ನೇಹಿ ಕಾರ್ಯಗಳನ್ನು ಜಾರಿಗೆ ತಂದ ಮಾಜಿ ಸಿಎಂ ಎಸ್.ಬಂಗಾರಪ್ಪ ಅವರು ರಾಜ್ಯದ ಜನತೆಯ ಹೃದಯದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ಎಂದು ಶಿವಮೊಗ್ಗ ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ಡಾ. ಆರ್.ಶ್ರೀಧರ್ ಹುಲ್ತಿಕೊಪ್ಪ ಬಣ್ಣಿಸಿದರು.

ಜಿಲ್ಲಾ ಆರ್ಯ ಈಡಿಗರ ಸಂಘದ ಭವನದಲ್ಲಿ ಗುರುವಾರ ಮಾಜಿ ಸಿಎಂ ಎಸ್.ಬಂಗಾರಪ್ಪ ಅವರ 90ನೇ ವರ್ಷದ ಜನ್ಮದಿನ ಉದ್ಘಾಟಿಸಿ ಮಾತನಾಡಿದ ಅವರು, ಕಾವೇರಿ ನೀರಿನ ವಿಚಾರ ಬಂದಾಗ ಸುಗ್ರೀವಾಜ್ಞೆ ತಂದು ರೈತರ ಹಿತ ಕಾಪಾಡಿದರು. ಜನರಿಗೆ ಸಹಾಯ ಮಾಡುವ ವಿಚಾರ ಬಂದಾಗ ಕಾನೂನಿನ ತಿದ್ದುಪಡಿ ಮಾಡಿ ಸಹಾಯ ಮಾಡಿದ ಕೀರ್ತಿ ಬಂಗಾರಪ್ಪ ಅವರದ್ದು ಎಂದರು.
ಮುಖ್ಯಮಂತ್ರಿ ಆದ ಸಂದರ್ಭದಲ್ಲಿ ಅನೇಕ ಜನರ ಪರ ಯೋಜನೆಗಳನ್ನು ಜಾರಿಗೆ ತಂದರು. ಶಿವಮೊಗ್ಗ ಮೆಗ್ಗಾನ್ ಜಿಲ್ಲಾಸ್ಪತ್ರೆಯನ್ನು ಸಾವಿರ ಹಾಸಿಗೆ ಉಳ್ಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿದರು. ಗಾಜನೂರಿಂದ ಶಿವಮೊಗ್ಗಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದರು. ಶಿವಮೊಗ್ಗ-ಭದ್ರಾವತಿ ಮಹಾನಗರ ಪಾಲಿಕೆಯನ್ನಾಗಿ ರಚಿಸಿದ್ದರು. ಶಿವಮೊಗ್ಗದಲ್ಲಿ ಕೃಷಿ ವಿಶ್ವವಿದ್ಯಾನಿಲಯ ಆರಂಭಿಸಿದ್ದರು ಎಂದರು.
ರೈತರ ಮಕ್ಕಳಿಗೆ ಕೃಷಿ ಕಾಲೇಜಿನಲ್ಲಿ ಶೇ.10ರಷ್ಟು ಮೀಸಲಾತಿ ನೀಡಿದ್ದರು. ಶೇ.15ರಷ್ಟು ಗ್ರಾಮೀಣ ಕೃಪಾಂಕ ಜಾರಿಗೆ ತಂದಿದ್ದರು. ಅವರ ಹೆಸರು ಚಿರಸ್ಥಾಯಿಯಾಗಿ ಉಳಿಬೇಕಾದರೆ ಅವರೇ ಜಾರಿಗೆ ತಂದಿದ್ದ ಆಶ್ರಯ ಯೋಜನೆಗೆ ಬಂಗಾರಪ್ಪ ಹೆಸರಿಡಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ಪ್ರಮುಖರಾದ ಪ್ರೊ. ಕಲ್ಹನ, ಜಿ.ಡಿ.ಮಂಜುನಾಥ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net