ಬಂಗಾರಪೇಟೆ ಪುರಸಭೆ ಕಾಂಗ್ರೆಸ್​ ವಶಕ್ಕೆ

ಬಂಗಾರಪೇಟೆ ಪುರಸಭೆಯ 2ನೇ ಅವಧಿಗೆ ಅಧ್ಯಕ್ಷರಾಗಿ ಗೋವಿಂದ, ಉಪಾಧ್ಯೆಯಾಗಿ ಚಂದ್ರವೇಣಿ ಮಂಜುನಾಥ್​ ಆಯ್ಕೆಯಾದ ಹಿನ್ನೆಲೆಯಲ್ಲಿ ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಸನ್ಮಾನಿಸಿದರು. ಹಿರಿಯ ಸದಸ್ಯರಾದ ಶಂಷುದ್ದಿನ್​ ಬಾಬು, ಅರುಣಾಚಲಂ ಮಣಿ, ಪ್ರಭಾಕರ್​, ನಗರ ಕಾಂಗ್ರೆಸ್​ ಅಧ್ಯಕ್ಷ ಚಂದ್ರುಕುಮಾರ್​, ಪಾರ್ಥಸಾರಧಿ, ಸುಹೇಲ್​, ಫರ್ಜಾನ ಇದ್ದರು.
19 Bangarapete 1a
ಬಂಗಾರಪೇಟೆ ಪುರಸಭೆಯ 2ನೇ ಅವಧಿಗೆ ಅಧ್ಯಕ್ಷರಾಗಿ ಗೋವಿಂದ, ಉಪಾಧ್ಯೆಯಾಗಿ ಚಂದ್ರವೇಣಿ ಮಂಜುನಾಥ್​ ಆಯ್ಕೆಯಾದ ಹಿನ್ನೆಲೆಯಲ್ಲಿ ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಸನ್ಮಾನಿಸಿದರು. ಹಿರಿಯ ಸದಸ್ಯರಾದ ಶಂಷುದ್ದಿನ್​ ಬಾಬು, ಅರುಣಾಚಲಂ ಮಣಿ, ಪ್ರಭಾಕರ್​, ನಗರ ಕಾಂಗ್ರೆಸ್​ ಅಧ್ಯಕ್ಷ ಚಂದ್ರುಕುಮಾರ್​, ಪಾರ್ಥಸಾರಧಿ, ಸುಹೇಲ್​, ಫರ್ಜಾನ ಇದ್ದರು.
Published on

ಅಧ್ಯಕ್ಷರಾಗಿ ಗೋವಿಂದ, ಉಪಾಧ್ಯೆಯಾಗಿ ಚಂದ್ರವೇಣಿ ಮಂಜುನಾಥ್​ ಅವಿರೋಧ ಆಯ್ಕೆ



ಬಂಗಾರಪೇಟೆ
: ನಿರೀಕ್ಷೆಯಂತೆ ಪಟ್ಟಣದ ಪುರಸಭೆಯ ಎರಡನೇ ಅವಧಿಗೆ ಕಾಂಗ್ರೆಸ್​ನ ಗೋವಿಂದ ಅಧ್ಯಕ್ಷರಾಗಿ, ಚಂದ್ರವೇಣಿ ಮಂಜುನಾಥ್​ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು.
ಕಳೆದ 16 ತಿಂಗಳಿಂದ ಪುರಸಭೆಯಲ್ಲಿ ಜನಪ್ರತಿನಿಧಿಗಳ ಆಡಳಿತವಿಲ್ಲದೆ ಅಧಿಕಾರಿಗಳ ದರ್ಬಾರ್​ನಲ್ಲಿ ಆಡಳಿತ ನಡೆಯುತ್ತಿತ್ತು. ಸೋಮವಾರ ಪೂರ್ವನಿಗದಿಯಂತೆ ಚುನಾವಣೆ ಪ್ರಕ್ರಿಯೆಯಲ್ಲಿ ಚುನಾವಣಾಧಿಕಾರಿಯೂ ಆದ ತಹಸೀಲ್ದಾರ್​ ವೆಂಕಟೇಶಪ್ಪ ಅವರು ಅವಿರೋಧ ಆಯ್ಕೆಯ ಲಿತಾಂಶ ಘೋಷಿಸಿದರು.
ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಮಾತನಾಡಿ, ಪುರಸಭೆ ಆಡಳಿತ ಮಂಡಳಿಯನ್ನು ಮೊದಲಿನಿಂದಲೂ ನಾಗರಿಕರು ಕಾಂಗ್ರೆಸ್​ ತೆಕ್ಕೆಗೆ ನೀಡುತ್ತಿದ್ದು, ಇದರಿಂದ ಪಟ್ಟಣದಲ್ಲಿ ಹೆಚ್ಚಿನ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಹಕಾರಿಯಾಗಿದೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಲು ಪಕ್ಷದಲ್ಲಿ ಅನೇಕ ಆಕಾಂಕ್ಷಿಗಳಿದ್ದರೂ ಸಹ ಗೋವಿಂದ ಹಾಗೂ ಚಂದ್ರವೇಣಿ ಪಕ್ಷಕ್ಕೆ ತೋರಿರುವ ನಿಷ್ಠೆ ಹಾಗೂ ಸೇವೆಯನ್ನು ಪರಿಗಣಿಸಿ ಪುರಸಭೆ ಆಡಳಿತದ ಜವಾಬ್ದಾರಿ ನೀಡಲಾಗಿದೆ ಎಂದರು.
ಪಟ್ಟಣವನ್ನು ಸ್ಮಾರ್ಟ್​ಸಿಟಿ ಮಾಡಲು ಯೋಜನೆ ರೂಪಿಸಿದ್ದು, ಇದಕ್ಕೆ ನೂತನ ಅಧ್ಯಕ್ಷ, ಉಪಾಧ್ಯಕ್ಷರು ಸಹಕಾರ ನೀಡಬೇಕು. ಮುಂದೆ ನಡೆಯುವ ಪುರಸಭೆ ಚುನಾವಣೆಯಲ್ಲಿ 27 ಸದಸ್ಯರ ಪೈಕಿ 27 ಸದಸ್ಯರನ್ನು ಕಾಂಗ್ರೆಸ್​ ಸದಸ್ಯರೇ ಗೆಲ್ಲುವಂತೆ ಮಾಡುವ ಜವಾಬ್ದಾರಿ ಅಧ್ಯಕ್ಷ ಗೋವಿಂದ ಅವರ ಹೆಗಲ ಮೇಲಿದೆ. ಆ ರೀತಿ ಅವರು ಪಟ್ಟಣದ ಎಲ್ಲ ಬಡಾವಣೆಗಳಲ್ಲೂ ಪಕ್ಷಾತಿತವಾಗಿ ಅಭಿವೃದ್ಧಿ
ಕಾರ್ಯ ಮಾಡಬೇಕು ಎಂದು ಹೇಳಿದರು.
ಪಟ್ಟಣದ ಹೊರವಲಯದಲ್ಲಿ ಬೈಪಾಸ್​ರಸ್ತೆ ನಿಮಾರ್ಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಾರಹಳ್ಳಿ ಗುಡಿಸಲು ಮೂಲಕ ತಮ್ಮೇನಹಳ್ಳಿ ಮಾರ್ಗವಾಗಿ ಬೆಂಗನೂರು ಫುಡ್​ಗೋಡನ್​ವರೆಗೂ ಬೈಪಾಸ್​ರಸ್ತೆಗೆ ಮುಖ್ಯಮಂತ್ರಿಗಳ ಬಳಿ ಚರ್ಚಿಸಲಾಗಿದೆ. ಭೂಸ್ವಾದಿನ ಸೇರಿ 100 ಕೋಟಿ ಅಂದಾಜು ಮಾಡಿಲಾಗಿದೆ. ಆಲದ ಮರದ ಬಳಿಯ ವಸಂತನಗರದಲ್ಲಿ ಟೌನ್​ಶಿಪ್​ ಮಾಡಲಾಗುವುದು. ಪಟ್ಟಣದಲ್ಲಿ ನೆನೆಗುದಿಗೆ ಬಿದ್ದಿರುವ ಬಸ್​ ನಿಲ್ದಾಣ, ಇಂಡೋರ್​ಸ್ಟೇಡಿಯಂ, ರಂಗಮಂದಿರ
ಪೂರ್ಣಗೊಳಿಸುವುದು ನೂತನ ಅಧ್ಯಕ್ಷರ ಜವಾಬ್ದಾರಿಯಾಗಿದೆ ಎಂದರು.ಮುಖಂಡರಾದ ಗಂಗಮ್ಮ, ಶಾರದ, ಹಿಂದುಳಿ ವರ್ಗಗಳ ಅಧ್ಯಕ್ಷ ಕುಂಬಾರಪಾಳ್ಯ ಮಂಜುನಾಥ್​, ಮುಖ್ಯಾಧಿಕಾರಿ ಸತ್ಯನಾರಾಯಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net