

ಉತ್ತಮ ಪ್ರದರ್ಶನ ನೀಡಿದ ಬೆಂಗಳೂರು ವೊಕೇಷಶನಲ್ಸ್ ತಂಡವು ಎಂಎನ್ ಭಗತ್ ಸಿಂಹ ಸ್ಮಾರಕ ರಾಜ್ಯ ಮಟ್ಟದ ಟಿ-20 ಕ್ರಿಕೆಟ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು.
ನಗರದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ಇತ್ತೀಚೆಗೆ ನಡೆದ ಫೈನಲ್ ಪಂದ್ಯದಲ್ಲಿ ವಿಜಯ ಕ್ರಿಕೆಟ್ ಕ್ಲಬ್‌ಅನ್ನು 5 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಚಾಂಪಿಯನ್ ಪಟ್ಟಕ್ಕೇರಿತು.
ಮೊದಲ ಬ್ಯಾಟಿಂಗ್ ಮಾಡಿದ ವಿಜಯ ಕ್ರಿಕೆಟ್ ಕ್ಲಬ್ ತಂಡ ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್(39 ರನ್) ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 148 ರನ್ ಗಳಿಸಿತು. ಬಳಿಕ ಸಾಧಾರಣ ಮೊತ್ತ ಬೆನ್ನಟ್ಟಿದ ಬೆಂಗಳೂರು ವೊಕೇಷಶನಲ್ಸ್ ತಂಡವು 17.3 ಓವರ್‌ಗಳಲ್ಲಿ ದಡ ಸೇರಿತು.