ನಂದಿನಿ ಲೇಔಟ್​ನಲ್ಲಿಂದು ಬೆಂಗಳೂರು ಉತ್ಸವ

Bengaluru Utsava
Published on

ರಾಜಧಾನಿಯ ವಿವಿಧ ಬಡಾವಣೆಗಳಲ್ಲಿ ಮಾಹಿತಿ- ಮನರಂಜನೆ- ಸಾಂಸ್ಕೃತಿಕ ಹಿರಿಮೆ ಸಾರುವ ವಿನೂತನ ಪರಿಕಲ್ಪನೆಯೇ ಬೆಂಗಳೂರು ಉತ್ಸವ. ಇದು ನಮ್ಮ ಏರಿಯಾದ ಬೀದಿಗಳಲ್ಲಿ ನಡೆಯುವ ನಮ್ಮ ಹಬ್ಬ. ಕನ್ನಡದ ನಂ.1 ದಿನಪತ್ರಿಕೆ ‘ವಿಜಯವಾಣಿ’ ಭಾನುವಾರ (ಡಿ.1) ನಂದಿನಿ ಲೇಔಟ್​ನಲ್ಲಿ ‘ಬೆಂಗಳೂರು ಉತ್ಸವ’ ಆಯೋಜಿಸಿದೆ. ಬಿಬಿಎಂಪಿ, ಪೊಲೀಸ್ ಇಲಾಖೆ ಸಹಕಾರದೊಂದಿಗೆ ನಡೆಯಲಿರುವ ಉತ್ಸವದಲ್ಲಿ ಸ್ಯಾಂಡಲ್​ವುಡ್ ಹಾಗೂ ಕಿರುತೆರೆಯ ಖ್ಯಾತ ನಟ-ನಟಿಯರು ಪಾಲ್ಗೊಳ್ಳಲಿದ್ದಾರೆ. ಮನೆಮಂದಿಯೊಂದಿಗೆ ನೀವೂ ಬಂದು ಸಂಭ್ರಮಿಸಿ.

ಬೆಂಗಳೂರು: ಮನರಂಜನೆಯೊಂದಿಗೆ ಸಾಂಸ್ಕೃತಿಕ ಹಿರಿಮೆ ಗರಿಮೆ ಸಾರುವ ವಿನೂತನ ಪರಿಕಲ್ಪನೆಯೊಂದಿಗೆ ಕನ್ನಡದ ನಂ.1. ದಿನಪತ್ರಿಕೆ ವಿಜಯವಾಣಿ ‘ಬೆಂಗಳೂರು ಉತ್ಸವ’ ಆಯೋಜಿಸುತ್ತಿದ್ದು, ಬನ್ನಿ ಮನ ದಣಿಯೆ ಆಟ ಆಡಿ, ಮಸ್ತ್ ಮಜಾ ಮಾಡಿ...

ಭಾನುವಾರ (ಡಿ.1) ನಂದಿನಿ ಲೇಔಟ್​ನ ನವರಾತ್ರಿ ವೃತ್ತದ ಬಳಿಯ ದುರ್ಗಾಪರಮೇಶ್ವರಿ ದೇವಸ್ಥಾನ ಬಳಿ ‘ನಮ್ಮ ಬೀದಿ- ನಮ್ಮ ಉತ್ಸವ’ ಶೀರ್ಷಿಕೆಯಡಿ ‘ಬೆಂಗಳೂರು ಉತ್ಸವ’ಕ್ಕೆ ವೇದಿಕೆ ಸಿದ್ಧಪಡಿಸಲಾಗಿದೆ. ಬೆಳಗ್ಗೆ 7 ಗಂಟೆಗೆ ಬುಲೆಟ್ ರ‍್ಯಾಲಿ ಮೂಲಕ ಉತ್ಸವ ಆರಂಭವಾಗಲಿದೆ.

ವಿಜಯಾನಂದ ಟ್ರಾವೆಲ್ಸ್, ಐಶ್ವರ್ಯ ಟೀ ಇಂಡಸ್ಟ್ರೀಸ್, ಬೆನಕ ಗೋಲ್ಡ್, ಶರಣ್ಯಾ ಫಾಮ್್ಸರ್ ನಂದಿನಿ ಪ್ರಾಯೋಜಕತ್ವದಲ್ಲಿ ಉತ್ಸವ ನಡೆಯಲಿದೆ. ಮಾಜಿ ಸಚಿವ ಕೆ. ಗೋಪಾಲಯ್ಯ, ಬಿಬಿಎಂಪಿ ಮಾಜಿ ಸದಸ್ಯ ಕೆ.ವಿ. ರಾಜೇಂದ್ರಕುಮಾರ್, ನಟ ವಿರಾಟ್, ನಟಿ ಸಂಜನಾ ಆನಂದ್, ‘ಭೀಮ’ ಚಿತ್ರದ ಪ್ರಿಯಾ ಸೇರಿ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ. ಮೊದಲಿಗೆ ಹೀಲ್ಸ್ ಆನ್ ವ್ಹೀಲ್ಸ್

ಸಂಸ್ಥೆಯ ಎನ್. ಸಮನ್ವಿತಾ ನೇತೃತ್ವದಲ್ಲಿ ಸಾಂಪ್ರದಾಯಿಕ ಉಡುಗೆಯುಟ್ಟ ಮಹಿಳೆಯರ ಬುಲೆಟ್ ರ‍್ಯಾಲಿ ನಡೆಯಲಿದೆ. ನಂತರ ವಿಶ್ಮಾ ಪೊನ್ನಪ್ಪ ಯೋಗ ಹೇಳಿಕೊಡಲಿದ್ದಾರೆ. ಇದಾದ ಬಳಿಕ ತ್ರಿಲೋಕ ಡಾನ್ಸ್ ಆಂಡ್ ಫಿಟ್​ನೆಸ್ ಕೇಂದ್ರದ ತ್ರಿಲೋಕ್ ಮತ್ತು ಸಂಗಡಿಗರು ಜುಂಬಾ ಮೂಲಕ ಉತ್ಸವಕ್ಕೆ ಮೆರುಗು ತರಲಿದ್ದಾರೆ. ಹ್ಯಾರಿ ಡಿಕ್ರೂಜ್ ಮತ್ತು ಡಿಜೆ ರಬ್ಜ ಅವರು ಬೀಟ್ ಬಾಕ್ಸಿಂಗ್ ಮತ್ತು ಡಿಜೆ ನಡೆಸಿಕೊಡಲಿದ್ದಾರೆ. ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳ ತಂಡ ಡಾನ್ಸ್ ಮತ್ತು ಡೊಳ್ಳು ಕುಣಿತದ ಮುಖಾಂತರ ಉತ್ಸವದ ರಂಗು ಹೆಚ್ಚಿಸಲಿದ್ದಾರೆ. ಉದಯ್ ಜಾದುಗಾರ್ ಮತ್ತು ಅವರ ಶಿಷ್ಯ ಮ್ಯಾಜಿಕ್ ಶೋ ನಡೆಸಿಕೊಡಲಿದ್ದಾರೆ. ಮಯೂರ ಡಾನ್ಸ್ ಅಕಾಡೆಮಿ, ಜಗನ್ ಡಾನ್ಸ್ ಅಕಾಡೆಮಿ ಮತ್ತು ಶ್ರೀ ಶಿವಜ್ಯೋತಿ ಕಲ್ಚರಲ್ ಡಾನ್ಸ್ ಆಂಡ್ ಅಕಾಡೆಮಿ ಭಾಗವಹಿಸಲಿದೆ. ಗೀತಸ್ ಗ್ರ್ಯಾವಿಟಿ ಫ್ಯಾಶನ್ ಶೋ ಪ್ರಸ್ತುತಪಡಿಸುತ್ತಿದೆ.

 ಪ್ರಿಯಾರಿಂದ ಯೋಗಾಭ್ಯಾಸ: ‘ಭೀಮ’ ಚಿತ್ರದಲ್ಲಿ ಗಿರಿಜಾ ಎಂಬ ಪೊಲೀಸ್ ಪಾತ್ರದಲ್ಲಿ ಮಿಂಚಿದ್ದ ನಟಿ ಪ್ರಿಯಾ ಶಠಮರ್ಷಣ ‘ಬೆಂಗಳೂರು ಹಬ್ಬ’ದ ಭಾಗವಾಗುತ್ತಿದ್ದಾರೆ. ಬೆಳಗ್ಗೆ 7.30ಕ್ಕೆ ನಡೆಯುವ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಸಾರ್ವಜನಿಕರೊಂದಿಗೆ ಯೋಗಾಭ್ಯಾಸ ಮಾಡಲಿದ್ದಾರೆ. ರಂಗಭೂಮಿ ಹಿನ್ನೆಲೆಯ ಪ್ರಿಯಾ ಅವರು ಕನ್ನಡದ ‘ರಾಮಾ ರಾಮಾ ರೇ’, ‘19.20.21’, ‘ಜೀನಿಯಸ್ ಮುತ್ತ’ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ದುನಿಯಾ’ ವಿಜಯ್ ನಿರ್ದೇಶನದ ‘ಭೀಮ’ ಚಿತ್ರದ ಪೊಲೀಸ್ ಅಧಿಕಾರಿ ಪಾತ್ರವು ಇವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿತ್ತು. ಇದೀಗ, ಅವರು ‘ಕಸ್ಟಡಿ’ ಹಾಗೂ ‘ಕುಂಭ ಸಂಭವ’ ಸಿನಿಮಾಗಳಲ್ಲೂ ಪಾತ್ರ ನಿರ್ವಹಿಸುತ್ತಿದ್ದಾರೆ. ಪ್ರಿಯಾ ನಟಿಸಿರುವ ‘ಗಾಂಧಿ ಸ್ಕೆ್ವೕರ್’, ‘ಚುಮುರಿ’ ಬಿಡುಗಡೆಗೆ ಸಿದ್ಧತೆ ನಡೆಸಿವೆ.

Bengaluru Utsava

ರಾಯಲ್ ಜುಂಬಾ: ‘ಬೆಂಗಳೂರು ಹಬ್ಬ’ದಲ್ಲಿ ನಟ ವಿರಾಟ್ ಹಾಗೂ ನಾಯಕಿ ಸಂಜನಾ ಆನಂದ್ ಪಾಲ್ಗೊಳ್ಳಲಿದ್ದು, ಜುಂಬಾ ಪ್ರದರ್ಶನ ನೀಡಲಿದ್ದಾರೆ. ತೂಗುದೀಪ್ ದಿನಕರ್ ನಿರ್ದೇಶನದ ‘ರಾಯಲ್’ ಚಿತ್ರದ ‘ಟಂಗ್ ಟಂಗ್’, ‘ನಾನೇ ಕೃಷ್ಣ, ನಾನೇ ಶ್ಯಾಮ’ ಎರಡು ಸಾಂಗ್ ಬಿಡುಗಡೆಯಾಗಿದ್ದು, ವೈರಲ್ ಆಗಿವೆ. ಚಿತ್ರದ ನಾಯಕ ವಿರಾಟ್ ‘ಕಿಸ್’ ಚಿತ್ರದ ಮೂಲಕ ಭರವಸೆ ಮೂಡಿಸಿದ್ದರು. ‘ರಾಯಲ್’ ಸಿನಿಮಾ ಮೂಲಕ ಮತ್ತೊಮ್ಮೆ ಮಿಂಚಲು ರೆಡಿಯಾಗಿದ್ದಾರೆ. ಇನ್ನು, ಮೋಹಕ ಅಭಿನಯದಿಂದ ಗಮನಸೆಳೆದಿರುವ ನಟಿ ಸಂಜನಾ ಆನಂದ್ ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ‘ಕೆಮಿಸ್ಟಿ ಆಫ್ ಕರಿಯಪ್ಪ’ ಚಿತ್ರದ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡಿದ್ದರು. ಇವರ ಎರಡನೇ ಸಿನಿಮಾ ‘ಸಲಗ’ ದೊಡ್ಡ ಮಟ್ಟದ ಹಿಟ್ ಕಂಡಿತ್ತು. ಬಳಿಕ ‘ಕುಷ್ಕಾ’, ‘ಶೋಕಿವಾಲಾ’, ‘ವಿಂಡೋ ಶೀಟ್’ನಲ್ಲಿ ನಟಿಸಿದ್ದರು. ‘ನೆನು ಮಿಕು ಬಾಗಾ ಕಾವಾಲ್ಸಿನವಾಡಿನಿ’ ಮೂಲಕ ಟಾಲಿವುಡ್ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದ್ದರು. ಬಹು ಬೇಡಿಕೆ ನಟಿಯಾಗಿರುವ ಸಂಜನಾ ‘ರಾಯಲ್’, ‘ಮುಧೋಳ್’ ಸೇರಿ ಹಲವು ಸಿನಿಮಾಗಳು ಲೈನಪ್​ನಲ್ಲಿವೆ.

ಮುಖ್ಯಾಂಶಗಳು: ಯೋಗ, ಜುಂಬಾ, ಮಕ್ಕಳಿಗಾಗಿ ಚಿತ್ರಕಲೆ ಸ್ಪರ್ಧೆ, ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಬುಲೆಟ್ ರ್ಯಾಲಿ, ಅಪ್ಪಟ ಕನ್ನಡದಲ್ಲಿ ಒಂದು ನಿಮಿಷದ ಮಾತು, ನೃತ್ಯ, ಬೀಟ್ ಬಾಕ್ಸಿಂಗ್ ಮತ್ತು ಡಿಜೆ, ಜಾನಪದ ತಂಡಗಳಿಂದ ಕಲಾ ಪ್ರದರ್ಶನ, ಜಾದೂ ಪ್ರದರ್ಶನ, ಗಾಯನ, ವ್ಯಂಗ್ಯಚಿತ್ರ ಮತ್ತು ಕುಂಬಾರಿಕೆ, ಸಾಮಾನ್ಯ ಜ್ಞಾನ, ಮಂದಗತಿಯ ಸೈಕಲ್ ಚಾಲನೆ, ಚಮಚ ಮತ್ತು ನಿಂಬೆಹಣ್ಣು, ಗಿಲ್ಲಿ- ದಾಂಡು, ಕುಂಟೋಬಿಲ್ಲೆ, ಕೇರಂ, ಬುಗುರಿ, ಚದುರಂಗ, ಬ್ಯಾಡ್ಮಿಂಟನ್, ಛದ್ಮವೇಷ, ಹಗ್ಗಜಗ್ಗಾಟ, ಲಗೋರಿ ಸೇರಿ ಎಲ್ಲ ವಯೋಮಾನದವರಿಗೂ ಆಟಗಳು ಹಾಗೂ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.

ರಂಗೋಲಿ ಸ್ಪರ್ಧೆ, ಹಗ್ಗಜಗ್ಗಾಟ, ಚಿತ್ರ: ಬಿಡಿಸುವ ಸ್ಪರ್ಧೆ, ಕ್ವಿಜ್, ಸ್ಲೋ ಸೈಕ್ಲಿಂಗ್ ಸೇರಿ ಕೆಲವೊಂದು ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಆಕರ್ಷಕ ಬಹುಮಾನ ಇರಲಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು ನೋಂದಣಿ ಮಾಡಿ ಕೊಳ್ಳಬಹುದು. ಮೊದಲು ಹೆಸರು ನೋಂದಣಿ ಮಾಡಿಕೊಂಡವರಿಗೆ ಆದ್ಯತೆ ನೀಡಲಾಗುವುದು.

ಬೆಂಗಳೂರು ಉತ್ಸವದಲ್ಲಿ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಭಾಗವಹಿಸಬಹುದು. ಉಚಿತ ಪ್ರವೇಶ ಇರಲಿದೆ. ಮನೆ ಮಂದಿಯೊಂದಿಗೆ ಉತ್ಸವಕ್ಕೆ ಬಂದು ಮನಸಾರೆ ಸಂಭ್ರಮಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net