

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ವಿವಿಧ ಗ್ರಂಥಾಲಯಗಳಿಗೆ 2025-26ನೇ ಶೈಕ್ಷಣಿಕ ಸಾಲಿಗೆ ಒಂದು ವರ್ಷದ ಅವಧಿಗೆ ಸಹಾಯಕ ಗ್ರಂಥಪಾಲಕರ (ತಾತ್ಕಾಲಿಕ) ಹುದ್ದೆಗೆ ಅರ್ಜಿ ಆಹ್ವಾನಿಸಿದೆ.
ಈ ನೇಮಕಾತಿಗಳು ತಾತ್ಕಾಲಿಕ ನೇಮಕಾತಿಯಾಗಿದ್ದು ಯಾವ ಕಾರಣಗಳನ್ನು ನೀಡದೆ ರದ್ದುಗೊಳಿಸಲಾಗುವುದು. ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿಗಳನ್ನು ಅಂಕಪಟ್ಟಿ ಮತ್ತು ಇತರೆ ಪೂರಕ ದಾಖಲೆಗಳೊಂದಿಗೆ ಸ್ವ-ದೃಢೀಕರಿಸಿ, ಸಹಾಯಕ ಕುಲಸಚಿವರು, ಸಿಬ್ಬಂದಿ ವಿಭಾಗ 1. ಆಡಳಿತ ಕಛೇರಿ, ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿ, ಬೆಂಗಳೂರು-560056 ರವರಿಗೆ ಜು.31ರೊಳಗೆ ಸಲ್ಲಿಸಬೇಕು.
ಅಧಿಸೂಚನೆ ಹಾಗೂ ಅರ್ಜಿ ನಮೂನೆ ಮತ್ತು ಇನ್ನಿತರ ಮಾನದಂಡಗಳನ್ನು ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್ ಠಿಠಿ://ಚಿಚ್ಞಜಚ್ಝಟ್ಟಛ್ಠ್ಞಿಜಿಛ್ಟಿಜಿಠಿ.ಚ್ಟ್ಞಠಿ.ಜಟ.ಜ್ಞಿ ಗೆ ಭೇಟಿ ನೀಡಿ ಪಡೆಯಬಹುದು. ಸಂದರ್ಶನದ ದಿನಾಂಕಗಳನ್ನು ಸದ್ಯದಲ್ಲಿಯೇ ಪ್ರಕಟಿಸಲಾಗುವುದು ಎಂದು ಬೆಂ.ವಿವಿ ಪ್ರಕಟಣೆ ಹೊರಡಿಸಿದೆ.