ವ್ಹೀಲ್‌ಚೇರ್ ಕ್ರಿಕೆಟ್ ನಲ್ಲಿ ಬೆಂಗಳೂರು ತಂಡ ಪ್ರಥಮ

36
Published on

ಮೈಸೂರು: ದಸರಾ ಅಂಗವಾಗಿ ಅಲೈಯನ್ಸ್ ಕ್ಲಬ್ಸ್ ಇಂಟನ್ಯಾಷನಲ್ ಅಸೋಸಿಯೇಷನ್‌ನಿಂದ ದಿವ್ಯಾಂಗ ಪುರುಷರಿಗಾಗಿ ರಾಜ್ಯಮಟ್ಟದ ವ್ಹೀಲ್‌ಚೇರ್ ಕ್ರಿಕೆಟ್ ದಸರಾ ಕಪ್ ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು.

ವಿಜಯನಗರ ಒಂದನೇ ಹಂತದಲ್ಲಿರುವ ಮುಡಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ದಿವ್ಯಾಂಗ ಆಟಗಾರರು ಅದ್ಭುತ ಪ್ರದರ್ಶನ ನೀಡಿ ಪ್ರೇಕ್ಷಕರ ಮನಗೆದ್ದರು. ಬೆಂಗಳೂರು ತಂಡವು ಪ್ರಥಮ ಬಹುಮಾನವನ್ನು ಪಡೆಯುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿತು. ತುಮಕೂರು ಎರಡನೇ ಬಹುಮಾನ ಹಾಗೂ ಮೈಸೂರು ತಂಡವು ಮೂರನೇ ಸ್ಥಾನವನ್ನು ಗಳಿಸಿತು.

ಸಂಘಟಕರಾದ ಕಿರಣ್ ಕುಮಾರ್ ಪಂದ್ಯಾವಳಿಯನ್ನು ಯಶಸ್ವಿಯಾಗಿ ಮುನ್ನಡೆಸಿದರು. ಅಲೈಯನ್ಸ್ ಕ್ಲಬ್ಸ್ ಇಂಟರ್ ನ್ಯಾಷನಲ್ ಗವರ್ನರ್ ನಾಗರಾಜ ವಿ.ಬೈರಿ, ಸಂಸ್ಥೆಯ ಡಾ.ಎಸ್.ವೆಂಕಟೇಶ್, ಡಿ.ಆರ್.ಎಸ್. ಗಣೇಶ್, ಅಲೈಯನ್ಸ್ ಕ್ಲಬ್‌ನ ಡಿಸಿಎಸ್ ಎನ್. ಬೆಟ್ಟೇಗೌಡ ಇತರರು ಇದ್ದರು. ಆತಿಥೇಯ ಸಂಸ್ಥೆಯಾದ ಪ್ರಿನ್ಸ್ ಕ್ಲಬ್, ಪ್ರಿನ್ಸ್‌, ಐಕ್ಯ ಮತ್ತು ನಿಧಿ ಕ್ಲಬ್‌ಗಳ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net