ಹಾಡಹಗಲೇ ಝಳಪಿಸಿದ ಮಚ್ಚು-ಲಾಂಗು, ನಡುರಸ್ತೆಯಲ್ಲೇ ರೌಡಿಶೀಟರ್ ಮೇಲೆ ಮಾರಣಾಂತಿಕ ಹಲ್ಲೆ

dretdttery
Published on

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಪುಡಿ ರೌಡಿಗಳು ಪುಂಡಾಟ ನಡೆಸಿದ್ದು, ಹಾಡಹಗಲೇ ರೌಡಿಶೀಟರ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ.

ನಗರದ ಹೆಗಡೆ ನಗರದಲ್ಲಿ ಈ ಘಟನೆ ನಡೆದಿದೆ. ಗೋಬಿ ಅಂಗಡಿ ನಡೆಸುತ್ತಿದ್ದ ರೌಡಿಶೀಟರ್ ಜಲಕ್ ಎಂಬಾತನ ಮೇಲೆ ಮಚ್ಚಿನಿಂದ ಭೀಕರವಾಗಿ ಹಲ್ಲೆ ನಡೆಸಲಾಗಿದೆ. ಇದೇ ತಿಂಗಳ 11ನೇ ತಾರೀಖಿನಂದು ಈ ಕೃತ್ಯ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಲಾಂಗಿನಿಂದ ನಡೆದ ಹಲ್ಲೆಗೆ ಜಲಕ್ ಕೈ ತುಂಡಾಗಿದೆ. ಕುಮಾರ್ @ ಚಿಕ್ಕಕುಮಾರ, ಮೋಹನ ಎಂಬುವರು ವೈಯಕ್ತಿಕ ದ್ವೇಷ ಹಿನ್ನೆಲೆ ಭೀಕರವಾಗಿ ಹಲ್ಲೆ ನಡೆಸಿದ್ದಾರೆ. ಘಟನೆ ನಡೆದು 20 ನಿಮಿಷದಲ್ಲೇ ಕೊತ್ತನೂರು ಪೊಲೀಸರು ಆರೋಪಿಗಳನ್ನ ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net