ಬೆಂಗಳೂರು ರೈಲ್ವೆ ಲೈನ್ ಬದಲಿಸಲು ಒತ್ತಾಯ

snd mla
ಸಿಂಧನೂರಿನಲ್ಲಿ ಸಚಿವ ವಿ.ಸೋಮಣ್ಣಗೆ ಶಾಸಕ ಹಂಪನಗೌಡ ಬಾದರ್ಲಿ ಹಾಗೂ ನಗರಸಭೆ ಸದಸ್ಯರು ಗುರುವಾರ ಮನವಿ ಸಲ್ಲಿಸಿದರು. ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವೀರೇಶ ಹಟ್ಟಿ, ಶರಣಪ್ಪ ಉಪ್ಪಲದೊಡ್ಡಿ, ಆಲಂಬಾಷಾ, ಪ್ರಭುರಾಜ ಇದ್ದರು.
Published on

ಸಿಂಧನೂರು: ಸಿಂಧನೂರು-ಬೆಂಗಳೂರು ರೈಲು ಮಾರ್ಗ ಬದಲಿಸಿ, ಕಡಿಮೆ ಸಮಯದಲ್ಲಿ ಬೆಂಗಳೂರು ತಲುಪುವ ಲೈನ್‌ಗೆ ಲಿಂಕ್ ಕೊಡಲು ಕ್ರಮಕೈಗೊಳ್ಳಬೇಕೆಂದು ಶಾಸಕ ಹಂಪನಗೌಡ ಬಾದರ್ಲಿ ಹಾಗೂ ನಗರಸಭೆ ಸದಸ್ಯರು ಗುರುವಾರ ಸಚಿವ ವಿ.ಸೋಮಣ್ಣಗೆ ಮನವಿ ಸಲ್ಲಿಸಿದರು.

ಸದ್ಯ ಸಿಂಧನೂರು-ಯಶವಂತಪುರ(ಬೆಂಗಳೂರು) ರೈಲಿದೆ. ಆದರೆ, ಇದು 15 ತಾಸು ಸಮಯ ತೆಗೆದುಕೊಳ್ಳುತ್ತಿದೆ. ಇದರಿಂದ ರೈಲಿನಲ್ಲಿ ಜನರು ಸಂಚರಿಸಲು ಕಷ್ಟವಾಗಿದೆ. ಆದ್ದರಿಂದ ಸಿಂಧನೂರಿನಿಂದ ಯಶವಂತಪುರ ಎಕ್ಸಪ್ರೆಸ್ ಟ್ರೈನ್ (16546)ನನ್ನು ಸಂಜೆ 6 ಗಂಟೆಗೆ ಸಿಂಧನೂರು ಬಿಟ್ಟು ಬೆಳಗ್ಗೆ 6 ಗಂಟೆಗೆ ತಲುಪುವಂತೆ ಗಿಣಿಗೇರಾ, ಹೊಸಪೇಟೆ, ಬಳ್ಳಾರಿ, ಗುಂತಗಲ್ ಮಾರ್ಗಕ್ಕೆ ಪರಿವರ್ತಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಯಿತು.

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವೀರೇಶ ಹಟ್ಟಿ, ಶರಣಪ್ಪ ಉಪ್ಪಲದೊಡ್ಡಿ, ಆಲಂಬಾಷಾ, ಪ್ರಭುರಾಜ, ರಾಜು ಬಂಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net