ಜು.1ರಿಂದ ಗಣಂಗೂರು ಟೋಲ್‌ನಲ್ಲಿ ಶುಲ್ಕ ಸಂಗ್ರಹ: ಜಿಲ್ಲೆಯ 55 ಕಿ.ಮೀ ವ್ಯಾಪ್ತಿಗೆ ನಿಗದಿ

2
Published on

ಮಂಡ್ಯ: ಸಾಕಷ್ಟು ವಿವಾದ ಸೃಷ್ಟಿಸಿರುವ ಬೆಂಗಳೂರು-ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿಯ ಮಗದೊಂದು ಟೋಲ್‌ನಲ್ಲಿ ಅಂದರೆ ಶ್ರೀರಂಗಪಟ್ಟಣ ತಾಲೂಕು ಗಣಂಗೂರಿನಲ್ಲಿ ಜು.1ರ ಬೆಳಗ್ಗೆ 8ಗಂಟೆಗೆ ಶುಲ್ಕ ಸಂಗ್ರಹ ಮಾಡಲಾಗುತ್ತಿದೆ. ಈ ಸಂಬಂಧ ಈಗಾಗಲೇ ಪ್ರತಿ ವಾಹನಕ್ಕೆ ದುಬಾರಿ ದರವನ್ನೇ ನಿಗದಿ ಮಾಡಲಾಗಿದೆ.

ಬೆ-ಮೈ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿ, ಅಪಘಾತದ ಹಾಟ್‌ಸ್ಪಾಟ್, ಕಾಮಗಾರಿ ಅಪೂರ್ಣ ಸೇರಿದಂತೆ ಹತ್ತು ಹಲವು ವಿವಾದದ ಕೇಂದ್ರಬಿಂದುವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ವ್ಯಾಪ್ತಿಯ ಸಮಸ್ಯೆ ಬಗೆಹರಿಸುವವರೆಗೂ ಟೋಲ್ ಸಂಗ್ರಹ ಮಾಡದಂತೆ ಜನಪ್ರತಿನಿಧಿಗಳು ಒತ್ತಾಯಿಸಿದ್ದರು. ಆದರೆ ಈ ನಡುವೆಯೇ ಜಿಲ್ಲೆಯ 55.134 ಕಿ.ಮೀ ವ್ಯಾಪ್ತಿಗೆ ಶುಲ್ಕ ನಿಗದಿಪಡಿಸಲಾಗಿದೆ. ಅಂತೆಯೇ ಶುಲ್ಕ ವಸೂಲಿಗೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net