

ಮಂಗಳೂರು: ಬೆಂಗಳೂರು - ಮಂಗಳೂರು ರೈಲಿನ ಎಸಿ ಕೋಚ್‌ನಲ್ಲಿ 3.91 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವಾಗಿದೆ.
ನಗರದ ಜಪ್ಪುವಿನ 74 ವರ್ಷದ ಮಹಿಳೆ, ಆಕೆಯ ಮಗಳು ಮತ್ತು ಇಬ್ಬರು ಮೊಮ್ಮಕ್ಕಳು ಎ.7ರಂದು ಬೆಂಗಳೂರಿನಿಂದ ಮಂಗಳೂರಿಗೆ ಬರುವ ರೈಲಿನಲ್ಲಿ ಹೊರಟು ಮರುದಿನ ಬೆಳಗ್ಗೆ ಮನೆಗೆ ತಲುಪಿದಾಗ ವ್ಯಾನಿಟಿ ಬ್ಯಾಗ್ ನಲ್ಲಿ ಇಟ್ಟಿದ್ದ ಎರಡು ಬಳೆಗಳು, ಸರ ಸೇರಿದಂತೆ ಒಟ್ಟು 59.885 ಗ್ರಾಂ ಚಿನ್ನಾಭರಣ ಕಳವಾಗಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.