ಸೋದರ ಮಾವನ ಮನೆಯ ಕಿಟಕಿಗೇ ನೇತು ಬಿದ್ದಿತ್ತು ಅಳಿಯನ ಮೃತದೇಹ!

sucide'
Published on

ನೆಲಮಂಗಲ: ಯುವಕನೋರ್ವ ಆಸ್ಥಿ ವಿಚಾರದಲ್ಲಿ ಕುಟುಂಬದೊಂದಿಗೆ ಜಗಳವಾಡಿಕೊಂಡು, ಅದೇ ಸಿಟ್ಟಿನಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ಇಂತದ್ದೊಂದು ಘಟನೆ ವರದಿಯಾಗಿದೆ. ಚಿರಂಜೀವಿ (28) ತನ್ನ ಸೋದರ ಮಾವ ಲಕ್ಷ್ಮಣ್ ಎಂಬುವವರ ಮನೆಯಲ್ಲಿ ವಾಸವಿದ್ದ. ಇತ್ತೀಚೆಗೆ ಮನೆಯಲ್ಲಿ ಆಸ್ಥಿ ವಿಚಾರದಲ್ಲಿ ಜಗಳವಾಗಿದೆ. ಅದೇ ಕಾರಣಕ್ಕೆ ಯುವಕ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದಾನೆ. ಮನೆಯ ಕಿಟಕಿಗೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ನೆಲಮಂಗಲ ಗ್ರಾಮಾಂತರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net