ಬೆಂಗಳೂರು ಅಭಿವೃದ್ಧಿಗೆ ಅಪಾರ ಕೊಡುಗೆ

KUDGALI
ಕೂಡ್ಲಿಗಿ ತಾಲೂಕು ಕಚೇರಿಯಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಮಂಗಳವಾರ ಆಚರಿಸಲಾಯಿತು. ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಪಿ.ಶಿವರಾಜ, ಗ್ರೇಡ್-2 ತಹಸೀಲ್ದಾರ್ ಕುಮಾರಸ್ವಾಮಿ, ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಪಿ.ಡಿ.ರಂಗಪ್ಪ, ಶಿಕ್ಷಕ ತಿಮ್ಮೇಗೌಡ, ಉಪನ್ಯಾಸಕ ರಮೇಶ, ಹುಗ್ಗಿ ಬಸಣ್ಣ ಇತರರಿದ್ದರು.
Published on

ಕೂಡ್ಲಿಗಿ: ಪ್ರಸ್ತುತ ಪ್ರಮುಖ ತಾಂತ್ರಿಕ ಕೇಂದ್ರಗಳಲ್ಲಿ ಒಂದಾಗಿರುವ ಬೆಂಗಳೂರಿನ ಅಭಿವೃದ್ಧಿಗೆ ನಾಡಪ್ರಭು ಕೆಂಪೇಗೌಡರು ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದು ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಪಿ.ಶಿವರಾಜ ಹೇಳಿದರು.

ಪಟ್ಟಣದ ತಾಲೂಕು ಕಚೇರಿಯಲ್ಲಿ ಮಂಗಳವಾರ ತಾಲೂಕು ಆಡಳಿತ ಹಾಗೂ ಒಕ್ಕಲಿಗರ ಸಮಾಜ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾತಾನಾಡಿದರು. ಕೆಂಪೇಗೌಡರು ವಿಜಯನಗರ ಚಕ್ರವರ್ತಿಯ ಸಾರ್ವಭೌಮತ್ವ್ನ ಒಪ್ಪಿಕೊಂಡಿದ್ದರು.

ಸಾಮಾಜಿಕ ಸುಧಾರಣೆ

ಬೆಂಗಳೂರು ಪೇಟೆ, ಪ್ರಸ್ತುತ ಬೆಂಗಳೂರು ನಗರದ ಅಡಿಪಾಯ. ಸಾಮಾಜಿಕ ಸುಧಾರಣೆ ಮತ್ತು ಬೆಂಗಳೂರಿನಲ್ಲಿ ದೇವಾಲಯ, ಜಲಾಶಯ ನಿರ್ಮಿಸಲು ಕೊಡುಗೆ ನೀಡಿದ್ದಾರೆ. ಅನೇಕ ಕನ್ನಡ ಶಾಸನಗಳನ್ನು ಸ್ಥಾಪಿಸಿದರು. ಅವರ ಆಡಳಿತಾವಧಿಯಲ್ಲಿ ಜನರಿಗೆ ನೂರಾರು ಕೆರೆ, ಕಟ್ಟೆಗಳನ್ನು ನಿರ್ಮಿಸಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಜನರ ಏಳಿಗೆಗಾಗಿ ಶ್ರಮಿಸಿದರು ಎಂದು ತಿಳಿಸಿದರು.

ಶಿಕ್ಷಕ ತಿಮ್ಮೇಗೌಡ ಮಾತಾನಾಡಿದರು. ಗ್ರೇಡ್-2 ತಹಸೀಲ್ದಾರ್ ಕುಮಾರಸ್ವಾಮಿ, ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಪಿ.ಡಿ.ರಂಗಪ್ಪ, ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಪಿ.ಜಿ.ಮಂಜುನಾಥ, ಉಪಾಧ್ಯಕ್ಷ ಹನುಮಂತಪ್ಪ, ಜಿಲ್ಲಾ ನಿರ್ದೇಶಕರಾದ ನೀರ್ಕಲಪ್ಪ, ಪಿ.ವಿರೂಪಾಕ್ಷಪ್ಪ, ಮುಖಂಡರಾದ ಪಿ.ಗುರುಸ್ವಾಮಿ, ಚಂದ್ರಮೌಳಿ, ಎಸ್.ಕೆ.ಕೊಟ್ರೇಶ್, ನಾಗೇಶ, ರಮೇಶ್, ತಾಪಂ ಮಾಜಿ ಸದಸ್ಯ ವೀರೇಶ, ಉಪನ್ಯಾಸಕ ರಮೇಶ, ಕಂದಾಯ ನಿರೀಕ್ಷಕ ಯು.ನವೀನ್ ಕುಮಾರ್ ಇತರರಿದ್ದರು.

ಸದಸ್ಯರ ಅಸಮಾಧಾನ: ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮಕ್ಕೆ ತಹಸೀಲ್ದಾರ್, ತಾಲೂಕು ಮಟ್ಟದ ಅಧಿಕಾರಿಗಳು ಗೈರಾಗಿದ್ದಕ್ಕೆ ಸಮಾಜದ ಮುಖಂಡರು ಬೇಸರ ವ್ಯಕ್ತಪಡಿಸಿದರು. ಪ್ರತಿ ಗ್ರಾಪಂ ಹಾಗೂ ಸರ್ಕಾರಿ ಶಾಲೆಗಳಲ್ಲಿ ಕೆಂಪೇಗೌಡರ ಜಯಂತಿ ಆಚರಣೆ ಮಾಡುವಂತೆ ಪೂರ್ವಭಾವಿ ಸಭೆಯಲ್ಲಿ ತಿಳಿಸಿದರೂ ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ. ನೆಪಮಾತ್ರಕ್ಕೆ ಜಯಂತಿ ಆಚರಿಸಲಾಗುತ್ತಿದೆ ಎಂದು ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಪಿ.ಜಿ.ಮಂಜುನಾಥ ಹಾಗೂ ಪದಾಧಿಕಾರಿಗಳು ತಹಸೀಲ್ದಾರ್ ಟಿ.ಜಗದೀಶ ಅವರನ್ನು ತರಾಟೆಗೆ ತೆಗೆದುಕೊಂಡರು. ತಹಸೀಲ್ದಾರ್ ಟಿ.ಜಗದೀಶ ಮಾತಾನಾಡಿ, ಇನ್ಮುಂದೆ ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net