ವೇತನ ತಾರತಮ್ಯ ವಿರುದ್ಧ ಬೆಂಗಳೂರು ಚಲೋ: ತೊಕ್ಕೊಟ್ಟಿನಲ್ಲಿ ಸರ್ಕಾರಿ ನೌಕರರ ಸಮಾಲೋಚನಾ ಸಭೆ

sabhe (1)
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಉಳ್ಳಾಲ ತಾಲೂಕುಮಟ್ಟದ ರಾಜ್ಯ ಸರ್ಕಾರಿ ನೌಕರರ ಹಾಗೂ ನಿವೃತ್ತ ಸರ್ಕಾರಿ ನೌಕರರ ತಾಲೂಕು ಸಂಘ ರಚನೆ ಪ್ರಯುಕ್ತ ಸಮಾಲೋಚನೆ ಸಭೆ ತೊಕ್ಕೊಟ್ಟಿನ ರಿಚಲ್ ಚಾರಿಟೆಬಲ್ ಟ್ರಸ್ಟ್ ಕಚೇರಿಯಲ್ಲಿ ನಡೆಯಿತು.

ನಿವೃತ್ತ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಂಜುಳಾ ಮಾತನಾಡಿ, ರಾಜ್ಯಮಟ್ಟದ ಏಳನೇ ವೇತನ ಆಯೋಗದಲ್ಲಿ ಜುಲೈ 1 2022ರಿಂದ ಜುಲೈ 31 2024ರವರೆಗೆ ನಿವೃತ್ತರಾದ ನೌಕರರಿಗೆ ವೇತನದಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಇದನ್ನು ಖಂಡಿಸಿ ಸೆ.18ರಂದು ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಸಭೆಯಲ್ಲಿ ಉಳ್ಳಾಲ ತಾಲೂಕಿನಲ್ಲಿರುವ ಪ್ರತಿಯೊಬ್ಬ ನಿವೃತ್ತ ನೌಕರನೂ ಭಾಗವಹಿಸಬೇಕು ಎಂದರು.

ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಪ್ರದೀಪ್ ಡಿಸೋಜ ಹಾಗೂ ಎಪಿಎಂಸಿ ಕಾರ್ಯದರ್ಶಿ ಶಮಂತ್ ಕುಮಾರ್ ಶೆಟ್ಟಿ ಮುಖ್ಯ ಅತಿಥಿಯಾಗಿದ್ದರು.

ಉಳ್ಳಾಲ ತಾಲೂಕುಮಟ್ಟದ ನೂತನ ಸಮಿತಿ ರಚಿಸಲಾಗಿದ್ದು, ನಿವೃತ್ತ ಸರ್ಕಾರಿ ನೌಕರರ ಸಂಘದ ಸಂಚಾಲಕರಾಗಿ ಮಂಜುಳಾ, ಸಿರಿಲ್ ರಾಬರ್ಟ್ ಡಿಸೋಜ, ಮೋಹನ್ ಬಂಗೇರ, ನಾರಾಯಣ ತಲಪಾಡಿ, ಪುರುಷೋತ್ತಮ ಗಟ್ಟಿ ಅಯ್ಕೆಯಾದರು. ತಾಲೂಕು ಸಂಚಾಲಕರಾಗಿ ತಾಲೂಕು ಉಪತಹಸೀಲ್ದಾರ್ ನವನೀತ್ ಮಾಳವ, ಶಿಶು ಅಭಿವೃದ್ಧಿ ಯೋಜನಾ ನಿರೀಕ್ಷಕಿ ರೇಣುಕಾ ಆಯ್ಕೆಯಾದರು.

ಸಿರಿಲ್ ರಾಬರ್ಟ್ ಡಿಸೋಜ ಪ್ರಾಸ್ತಾವಿಕ ಮಾತನಾಡಿದರು. ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹ ವಂದಿಸಿದರು.

ರಾಜ್ಯಾದ್ಯಂತ ಎಲ್ಲ ತಾಲೂಕುಗಳಲ್ಲಿ ಸಂಘ ಇದೆ. ಉಳ್ಳಾಲ ತಾಲೂಕು ಆಗಿ ಎರಡು ವರ್ಷಗಳಾಗಿದ್ದು ಇಲ್ಲೂ ಸರ್ಕಾರಿ ಹಾಲಿ ಮತ್ತು ನಿವೃತ್ತ ನೌಕರರು ಒಗ್ಗಟ್ಟಿನಿಂದ ಇರಬೇಕೆನ್ನುವ ನೆಲೆಯಲ್ಲಿ ಸಂಘ ಅಸ್ತಿತ್ವಕ್ಕೆ ತರಲಾಗಿದೆ. ಶೀಘ್ರ ಉದ್ಘಾಟನಾ ಸಮಾರಂಭ ನಡೆಯಲಿದೆ. - ಸಿರಿಲ್ ರಾಬರ್ಟ್ ಡಿಸೋಜ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net