

ವಿಜಯವಾಣಿ ಸುದ್ದಿಜಾಲ ಉಡುಪಿ
ಉಡುಪಿಯ ಎಂಜಿಎಂ ಕಾಲೇಜಿನ ಮೈದಾನದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ವಕೀಲರ ಹೊನಲು-ಬೆಳಕಿನ ಕ್ರೀಡಾಕೂಟದಲ್ಲಿ ಮಾ.1ರಂದು ಸಂಜೆ ನಡೆದ ಕ್ರಿಕೆಟ್ ಪಂದ್ಯದಲ್ಲಿ ಬೆಂಗಳೂರಿನ ಯುವ ವಕೀಲ ಅರ್ಪಿತ್, ಆರು ಎಸೆತಗಳಲ್ಲಿ ಆರು ಸಿಕ್ಸರ್ ಹೊಡೆಯುವ ಮೂಲಕ ಗಮನ ಸೆಳೆದರು.
ಭಾರತದ ಕ್ರಿಕೆಟ್ ಆಟಗಾರ ಯುವರಾಜ್ ಸಿಂಗ್ ಇಂಗ್ಲಂಡ್ ತಂಡದ ವಿರುದ್ಧ ಆರು ಎಸೆತಗಳಲ್ಲಿ ಆರು ಸಿಕ್ಸರ್ ಸಿಡಿಸಿದ ರೀತಿಯಲ್ಲೇ ಅರ್ಪಿತ್ ಸಹ ಆರು ಸಿಕ್ಸರ್ ಸಿಡಿಸುವ ಮೂಲಕ ವೀಕ್ಷಕರ ಮನ ಗೆದ್ದರು. ಅವರ ಬ್ಯಾಟಿಂಗ್ ಅಬ್ಬರ ಕಂಡ ಪ್ರೇಕ್ಷಕರಿಗೆ ಯುವರಾಜ್ ಸಿಂಗ್ ಆಟದ ವೈಖರಿ ನೆನಪಿಸಿತು.