ಬಂಡು ಕೇರವಾಡಕರ್ ಬಂಧನಕ್ಕೆ ಆಗ್ರಹ

11 Jaggu2-Web
ಶಿವಸೇನೆ ಮುಖಂಡ ಬಂಡು ಕೇರವಾಡಕರ್ ಬಂಧನಕ್ಕೆ ಆಗ್ರಹಿಸಿ ಬೆಳಗಾವಿಯ ಬಾಪಟ್ ಗಲ್ಲಿ ನಿವಾಸಿಗಳು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟಿಸಿದರು. ಪ್ರಶಾಂತ ಮೆನಸೆ, ಸಂದೀಪ ಭೋಸ್ಲೆ, ಶಂಕರ ಪಾಟೀಲ, ಸಾಗರ ಬಿ. ಇತರರಿದ್ದರು.
Published on

ಬೆಳಗಾವಿ: ಶಿವಸೇನೆ ಮುಖಂಡ ಬಂಡು ಕೇರವಾಡಕರ್ ಬಂಧನಕ್ಕೆ ಆಗ್ರಹಿಸಿ ಬೆಳಗಾವಿ ಬಾಪಟ್ ಗಲ್ಲಿಯ ನಿವಾಸಿಗಳು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ಪ್ರತಿಭಟಿಸಿದರು. ಬೆಳಗಾವಿಯ ಬಾಪಟ್ ಗಲ್ಲಿ ನಿವಾಸಿ ವಿಜಯ ಗವಾನಿ ಅವರು ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರು ಬಂಡು ಕೇರವಾಡಕರ್ ಬಳಿ ಸಾಲ ತೆಗೆದುಕೊಂಡಿದ್ದರು. ಲಾಕ್‌ಡೌನ್‌ನಿಂದಾಗಿ ಕೆಲಸವಿಲ್ಲದೆ ಸಾಲ ಮರಳಿಸಲು ಸಾಧ್ಯವಾಗಿರಲಿಲ್ಲ. ಪ್ರತಿದಿನ ವಿಜಯ ಗವಾನಿ ಅವರ ಮನೆಗೆ ಬಂದು ಬಂಡು ಮಾನಸಿಕ ಕಿರುಕುಳ ನೀಡಿದ್ದಾರೆ.

ಇದರಿಂದಾಗಿ ವಿಜಯ ಗವಾನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣರಾದ ಬಂಡು ವಿರುದ್ಧ ಪ್ರಕರಣ ಕೂಡ ದಾಖಲಾಗಿದೆ. ಆದರೆ, ಇದುವರೆಗೂ ಬಂಡು ಬಂಧನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಬಂಡು ಕೇರವಾಡಕರ್ ಭಾವಚಿತ್ರ ದಹಿಸಿದರು.
ಕೂಡಲೇ ಬಂಡು ಕೇರವಾಡಕರ್‌ನನ್ನು ಬಂಧಿಸಬೇಕು. ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಅನ್ಯಾಯಕ್ಕೆ ಒಳಗಾದ ವಿಜಯ ಗವಾನಿ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಮೂಲಕ ಒತ್ತಾಯಿಸಿದರು. ಪ್ರಶಾಂತ ಮೆನಸೆ, ಸಂದೀಪ ಭೋಸ್ಲೆ, ಶಂಕರ ಪಾಟೀಲ, ಸಾಗರ ಬಿ., ವಿಕಾಸ ಎಂ.ಜಿ. ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net