ಬಂಡೀಪುರದಲ್ಲಿ ‘ಹುಲಿ ಸಂರಕ್ಷಣಾ ನಿಧಿ’ ದುರ್ಬಳಕೆ ಸದ್ದು

14raju10
Published on

ಗುಂಡ್ಲುಪೇಟೆ: ದೇಶದ ಪ್ರಸಿದ್ಧ ಹುಲಿ ಸಂರಕ್ಷಿತಾರಣ್ಯ ಪ್ರದೇಶವೆಂದು ಹೆಸರುವಾಸಿಯಾಗಿರುವ ಬಂಡೀಪುರವೀಗ ಗಂಭೀರ ಆರೋಪ ಹಾಗೂ ತನಿಖೆ ವಿಚಾರದಲ್ಲಿ ಚರ್ಚೆಗೆ ಗ್ರಾಸವಾಗಿದೆ.

‘ಬಂಡೀಪುರ ಹುಲಿ ಸಂರಕ್ಷಣಾ ನಿಧಿ’ ದುರ್ಬಳಕೆ ಆರೋಪದ ಮೇಲೆ ಅರಣ್ಯ ಸಂರಕ್ಷಣಾಧಿಕಾರಿ ಡಾ.ರಮೇಶ್‌ಕುಮಾರ್ ವಿರುದ್ಧ ಸರ್ಕಾರ ತನಿಖೆ ಮಾಡಲು ಮುಂದಾಗಿದ್ದು, ಪ್ರಕರಣ ತೀವ್ರ ಕುತೂಹಲ ಮೂಡಿಸಿದೆ. ಹಿಂದಿನಿಂದಲೂ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ನಾನಾ ಆರೋಪಗಳು ಕೇಳಿಬಂದಿದ್ದರೂ ಇಲ್ಲಿವರೆಗೆ ತನಿಖೆಯ ಹಂತಕ್ಕೆ ಹೋಗಿರಲಿಲ್ಲ. ಆದರೀಗ ಡಾ.ರಮೆಶ್‌ಕುಮಾರ್ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸೂಚಿಸಿರುವುದರಿಂದ ಈ ಪ್ರಕರಣ ಗಂಭೀರತೆ ಪಡೆದುಕೊಂಡಿದೆ.ಪ್ರತಿ ವರ್ಷ ಅರಣ್ಯ ಇಲಾಖೆಗೆ ಬರುತ್ತಿರುವ ಅನುದಾನ, ಕೈಗೊಂಡಿರುವ ಕೆಲಸಗಳ ಬಗ್ಗೆ ಮಾಹಿತಿ ಗುಟ್ಟಾಗಿರುತ್ತಿತ್ತು. ಆದರೆ ಅಧಿಕಾರಿಗಳ ಮುಸುಕಿನ ಗುದ್ದಾಟದಿಂದ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದರೂ ಸಿಗದ ದಾಖಲೆಗಳು ಕೆಲವರ ಕೈಗೆ ಅನಾಯಾಸವಾಗಿ ಸೇರುತ್ತಿವೆ ಎನ್ನಲಾಗುತ್ತಿದೆ.

ಹುಲಿ ಯೋಜನೆಯ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಡಾ.ರಮೇಶ್ ಕುಮಾರ್ ಅಧಿಕಾರ ಸ್ವೀಕರಿಸಿದ ನಂತರ ಬಂಡೀಪುರ ಹುಲಿ ಸಂರಕ್ಷಣಾ ನಿಧಿಯಿಂದ ದೊಡ್ಡ ಪ್ರಮಾಣದ ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆ. ಪ್ರತಿಷ್ಠಿತ ಗಜೇಂದ್ರ ಅತಿಥಿಗೃಹ ನವೀಕರಣ ಸೇರಿದಂತೆ ಕ್ರಿಯಾಯೋಜನೆ ತಯಾರಿಸಿ 14 ಕೋಟಿ ರೂ. ವೆಚ್ಚದ ಕಾಮಗಾರಿಯನ್ನು ಟೆಂಡರ್ ಕರೆಯದೆ ನಡೆಸಿದ್ದಾರೆ. ನಕಲಿ ಬಿಲ್ ಸೃಷ್ಟಿಸಿ ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ರೈತ ಸಂಘಟನೆ ಪ್ರತಿಭಟನೆ ನಡೆಸಿತ್ತು.

ನಮ್ಮ ಮೇಲಿನ ಆರೋಪಗಳ ಬಗ್ಗೆ ಆರು ತಿಂಗಳ ಹಿಂದೆಯೇ ಅರಣ್ಯ ಇಲಾಖೆ ಉನ್ನತ ಮಟ್ಟದ ಅಧಿಕಾರಿಗಳಿಂದ ತನಿಖೆ ನಡೆಸಿ ವರದಿ ಪಡೆದುಕೊಂಡಿದೆ. ವರದಿಯಲ್ಲಿ ಆರೋಪಗಳು ಸುಳ್ಳು ಎಂದು ತಿಳಿಸಿದ್ದರೂ ಸುಮ್ಮನಿರದ ಕೆಲವರು ಮತ್ತೆ ಮತ್ತೆ ಇದೇ ವಿಷಯಗಳನ್ನು ಕೆದಕುತ್ತಿದ್ದಾರೆ. ಶಾಸಕರು, ಸಚಿವರ ಮೂಲಕ ಮುಖ್ಯಮಂತ್ರಿಗಳಿಗೆ ತಲುಪಿಸಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಲಾಗುವುದು.-ಡಾ.ರಮೇಶ್‌ಕುಮಾರ್ ನಿರ್ದೇಶಕಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ಡಾ.ರಮೇಶ್‌ಕುಮಾರ್ ಮೇಲಿನ ಆರೋಪ ಕುರಿತು ಲೋಕಾಯುಕ್ತರು, ಹಿಂದಿನ ಅರಣ್ಯ ಸಚಿವರು, ಮುಖ್ಯಮಂತ್ರಿಗಳಿಗೂ ದೂರು ನೀಡಲಾಗಿತ್ತು. ಡಾ.ರಮೇಶ್‌ಕುಮಾರ್ ಇನ್ನೇನು ವರ್ಗಾವಣೆ ಆಗಬೇಕು ಎನ್ನುವಷ್ಟರಲ್ಲಿ ವಿಧಾನಸಭೆ ಚುನಾವಣೆ ಬಂದಿದ್ದರಿಂದ ಮುಂದೂಡಲ್ಪಟ್ಟಿತ್ತು. ಆದರೆ ನೂತನ ಸರ್ಕಾರ 7 ಐಎಫ್‌ಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದ್ದರೂ ಡಾ.ರಮೇಶ್‌ಕುಮಾರ್ ಅವರನ್ನು ಬದಲಾಯಿಸಿಲ್ಲ. ಇದನ್ನು ವಿರೋಧಿಸಿ ಕೆಲವು ದಿನಗಳ ಹಿಂದೆ ಬಂಡೀಪುರದಲ್ಲಿ ಪ್ರತಿಭಟನೆ ನಡೆಸಿ ಶಾಸಕ ಗಣೇಶ್‌ಪ್ರಸಾದ್ ಹಾಗೂ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಗಮನಕ್ಕೆ ತಂದಿದ್ದೆವು.-ಮಾಡ್ರಳ್ಳಿ ಮಹದೇವಪ್ಪ, ಜಿಲ್ಲಾ ರೈತ ಸಂಘದ ಗೌರವಾಧ್ಯಕ್ಷ, ಗುಂಡ್ಲುಪೇಟೆ ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ನಿರ್ದೇಶಕ ಡಾ.ರಮೇಶ್‌ಕುಮಾರ್ ವಿರುದ್ಧ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ಪತ್ರ ಬರೆದಿದ್ದೇನೆ. ವರ್ಗಾವಣೆಗೆ ಶಿಾರಸು ಮಾಡಿದ್ದೇನೆ.-ಎಚ್.ಎಂ.ಗಣೇಶ್‌ಪ್ರಸಾದ್, ಶಾಸಕ, ಗುಂಡ್ಲುಪೇಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net