ಪರಶುರಾಮಪುರದಲ್ಲಿ ಬಂದ್ ಪ್ರತಿಭಟನೆಗೆ ಸೀಮಿತ

PRPURA MANAVI 29
Published on

ಪರಶುರಾಮಪುರ: ಅಖಂಡ ಕರ್ನಾಟಕ ರೈತ ಸಂಘದ ಚಳ್ಳಕೆರೆ ಮತ್ತು ಗ್ರಾಮ ಶಾಖೆಯ ಪದಾಧಿಕಾರಿಗಳು ಶುಕ್ರವಾರ ಗ್ರಾಮದ ಮುಖ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿ ನಂತರ ನಾಡಕಚೇರಿಗೆ ತೆರಳಿ ಉಪ ತಹಸೀಲ್ದಾರ್ ಅನ್ನಪೂರ್ಣ ಅವರಿಗೆ ಮನವಿ ಸಲ್ಲಿಸಿದರು
ಗ್ರಾಮದ ವಿವಿಧ ಸಂಘಟನೆಗಳು, ಸ್ವ ಸಹಾಯ ಸಂಘಗಳು, ಹಮಾಲರು, ವರ್ತಕರು, ಆಟೋ, ಲಘು ವಾಹನಗಳ ಮಾಲಿಕರು, ಚಾಲಕರು, ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳ ರೈತ ಸಂಘಗಳ ಪದಾಧಿಕಾರಿಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದರು.
ಅಂಗಡಿ ಮುಂಗಟ್ಟುಗಳು ಬಾಗಿಲು ತೆರೆದು ವ್ಯವಹಾರ ನಡೆಸಿದವು, ಸರ್ಕಾರಿ ಬಸ್‌ಗಳ ಸಂಚಾರವಿತ್ತು. ಖಾಸಗಿ ಬಸ್‌ಗಳು ರಸ್ತೆಗೆ ಇಳಿದಿರಲಿಲ್ಲ.
ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷ ಕೆ.ಚಿಕ್ಕಣ್ಣ, ಪದಾಧಿಕಾರಿಗಳಾದ ಹನುಮಂತಪ್ಪ, ಬಾಷಾ, ಜಂಪಣ್ಣ, ಚೌಳೂರು ಪ್ರಕಾಶ, ಗ್ರಾಮಘಟಕದ ಅಧ್ಯಕ್ಷ ನವೀನಗೌಡ, ಕೊಂಡ್ಲೇರ ಪರಮೇಶ್ವರಪ್ಪ, ಕೃಷ್ಣಮೂರ್ತಿ, ಈರಣ್ಣ, ಕರಿಯಣ್ಣ ಬಸವರಾಜು, ತಿಮ್ಮಯ್ಯ, ನಾಗರಾಜು ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net