ಕೊಡಗು ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

bandh
Published on

ಮಡಿಕೇರಿ:

ದೇಶದ ಮಹಾನ್ ಸೇನಾನಿಗಳಾದ ಫೀ.ಮಾ. ಕೆ.ಎಂ. ಕಾರ್ಯಪ್ಪ ಮತ್ತು ಜ. ತಿಮ್ಮಯ್ಯ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಸಂದೇಶ ಹಾಕಿದ್ದ ವ್ಯಕ್ತಿಯನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಕೊಡಗು ಸರ್ವ ಜನಾಂಗಗಳ ಒಕ್ಕೂಟ ಗುರುವಾರ ಕರೆದಿದ್ದ ಕೊಡಗು ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ದಕ್ಷಿಣ ಕೊಡಗಿನ ಬಹುತೇಕ ಭಾಗಗಳಲ್ಲಿ ಬಂದ್ ಕರೆಗೆ ಉತ್ತಮ ಸ್ಪಂದನೆ ಸಿಕ್ಕಿದರೆ ಉಳಿದ ಕಡೆಗಳಲ್ಲಿ ಜನಜೀವನದ ಮೇಲೆ ಹೆಚ್ಚೇನೂ ಪರಿಣಾಮ ಬಿರಿದಂತೆ ಕಂಡುಬರಲಿಲ್ಲ.

ಬೆಳಗ್ಗೆ 6 ಗಂಟೆಯಿAದ ಮಧ್ಯಾಹ್ನ 12 ಗಂಟೆ ತನಕ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಖಾಸಗಿ ಬಸ್‌ಗಳ ಸಂಚಾರ ಸ್ಥಗಿತವಾಗಿತ್ತು. ಕೆಎಸ್‌ಆರ್‌ಟಿಸಿ ಬಸ್‌ಳ ಸಂಚಾರಕ್ಕೆ ಸಮಸ್ಯೆ ಆಗಿರಲಿಲ್ಲ. ಆಟೋ ರಿಕ್ಷಾಗಳ ಓಡಾಟ ಕಂಡುಬರುತ್ತಿತ್ತು. ಸಾರ್ವಜನಿಕರ ಓಡಾಟವೂ ಸಾಮಾನ್ಯವಾಗಿತ್ತು. ಕೆಲವು ಖಾಸಗಿ ಶಾಲೆಗಳು ರಜೆ ಘೋಷಿಸಿದ್ದವು. ಸರ್ಕಾರಿ ಶಾಲೆಗಳು ಎಂದಿನAತೆಯೇ ನಡೆದವು.

ಸಿದ್ದಾಪುರದಲ್ಲಿ ಬಹುತೇಕ ಹೋಟೆಲ್, ಅಂಗಡಿ ಮುಂಗಟ್ಟುಗಳು ಎಂದಿನAತೆ ಕಾರ್ಯ ನಿರ್ವಹಿಸಿದ್ದವು, ಆಟೋರಿಕ್ಷಾ, ಖಾಸಾಗಿ ವಾಹನ ಓಡಾಟ ಕಂಡು ಬಂದಿತು. ಹಾಲಿನ ಡೇರಿ, ಔಷಧಿ ಅಂಗಡಿ, ಪತ್ರಿಕಾ ವಿತ್ತರಣೆ, ಆಸ್ಪತ್ರೆಗಳಿಗೆ ಬಂದ್ ವಿನಾಯಿತಿ ಇದ್ದುದ್ದರಿಂದ ಕಾರ್ಯ ನಿರ್ವಹಿಸಿದವು. ಖಾಸಗಿ ಬಸ್ ಮಾಲೀಕರು ಬಸ್‌ಗಳನ್ನು ರಸ್ತೆಗೆ ಇಳಿಸದೆ ಮುಷ್ಕರಕ್ಕೆ ಸಾಥ್ ನೀಡಿದ್ದರು. ಖಾಸಗಿ ಶಾಲೆಗಳಿಗೆ ರಜೆ ನೀಡಲಾಗಿತ್ತು.

ಜಿಲ್ಲೆಯ ಪ್ರಮುಖ ವಾಣಿಜ್ಯ ನಗರಿ ಕುಶಾಲನಗರದಲ್ಲಿ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಬಹುತೇಕ ಅಂಗಡಿ ಮುಂಗಟ್ಟುಗಳು ಎಂದಿನAತೆಯೇ ತೆರೆದಿದ್ದವು. ಖಾಸಗಿ ಬಸ್‌ಗಳ ಸಂಚಾರ ಇರಲಿಲ್ಲ. ಸರ್ಕಾರಿ ಬಸ್‌ಗಳ ಓಡಾಟಕ್ಕೆ ಅಡ್ಡಿ ಇರಲಿಲ್ಲ. ಆಟೋ ರಿಕ್ಷಾ, ಟ್ಯಾಕ್ಸಿಗಳ ಓಡಾಟ ಸಾಮಾನ್ಯದಂತೆ ಇತ್ತು. ಕೊಡವ ಸಮಾಜದ ಪ್ರತಿನಿಧಿಗಳು ಕುಶಾಲನಗರ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ತಾಲೂಕು ಕೇಂದ್ರ ಸೋಮವಾರಪೇಟೆಯಲ್ಲಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಹುಟ್ಟೂರು ಶನಿವಾರಸಂತೆಯಲ್ಲಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಕೆಲ ಹೊಟೇಲ್, ಕ್ಯಾಂಟೀನ್, ಬೇಕರಿಗಳು, ಅಂಗಡಿ ಮುಂಗಟ್ಟು ಎಂದಿನAತೆ ತೆರೆದಿದ್ದವು.

ಆಟೋ, ಬೈಕ್ ಕಾರು ಜಿಪು ಎಂದಿನAತೆ ಸಂಚರಿಸಿದವು. ಸರ್ಕಾರಿ ಬಸ್‌ಗಳ ಓಡಾಟ ಎಂದಿನAತೆ ಇತ್ತು, ಖಾಸಗಿ ಬಸ್‌ಗಳ ಓಡಾಟ ಇರಲಿಲ್ಲ.

ಖಾಸಗಿ ಶಾಲೆಗಳು ಮುಚ್ಚಿದ್ದವು. ಸರ್ಕಾರಿ ಶಾಲೆಗಳು ಎಂದಿನAತೆ ಕಾರ್ಯಾಚರಿಸಿದವು. ಹಾಲು ಮಾರಾಟ ಕೇಂದ್ರ ಮತ್ತು ಪತ್ರಿಕೆ ವಿತರಣಾ ಮಳಿಗೆಗಳು, ಪೆಟ್ರೋಲ್ ಬಂಕ್‌ಗಳು, ಹೂವಿನ ಅಂಗಡಿ ತೆರೆದಿರುವುದು ಕಂಡುಬAತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net