

ತೂಬಗೆರೆ : ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿ ಎಸ್.ಎಸ್.ಘಾಟಿ ಸುಬ್ರಹ್ಮಣ್ಯ ದೇವಾಲಯದ ಸಮೀಪದ ಬಂಡೇಪಾಳ್ಯದಲ್ಲಿರುವ 31ಅಡಿ ಎತ್ತರದ ದೇವರಬೆಟ್ಟ ಶ್ರೀ ವಿಶ್ವ ಶನೈಶ್ಚರ ಸ್ವಾಮಿಯ 21ನೇ ವಾರ್ಷಿಕೋತ್ಸವ ನೆರವೇರಿಸಲಾಯಿತು.
ಕಾರ್ಯಕ್ರಮ ಹಿನ್ನೆಲೆಯಲ್ಲಿ ಕಲ್ಯಾಣೋತ್ಸವ, ಬ್ರಹ್ಮರಥೋತ್ಸವ, ಹಗಲು ಪರಿಷೆ ಕಾರ್ಯಕ್ರಮಗಳು ಸಂಭ್ರಮದಿಂದ ನೆರವೇರಿದವು. ಶ್ರೀ ಶನೈಶ್ಚರ ಸ್ವಾಮಿ, ಬನಶಂಕರಿ, ಪಂಚಮುಖಿ ಗಣಪತಿ, ಆಂಜನೇಯಸ್ವಾಮಿ, ಆದಿತ್ಯಾದಿ ನವಗ್ರಹಗಳಿಗೆ ಮೇ.26ರಿಂದ ಜೂ.1ರವರೆಗೆ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಕಲ್ಯಾಣೋತ್ಸವ, ಬ್ರಹ್ಮರಥೋತ್ಸವ, ಹಗಲು ಪರಿಷೆ ಹಿನ್ನೆಲೆ ದೇವಾಲಯದಲ್ಲಿ ಹಬ್ಬದ ವಾತಾವರಣ ಮೂಡಿತ್ತು. ನಾನಾ ಭಾಗಗಳಿಂದ ಆಗಮಿಸಿದ್ದ ಭಕ್ತರು ದೇವತಾ ಕಾರ್ಯಗಳನ್ನು ಕಣ್ತುಂಬಿಕೊಂಡು ದೇವರ ಕೃಪೆಗೆ ಪಾತ್ರರಾದರು.