

ಪರಶುರಾಮಪುರ: ಆಂಧ್ರ ಗಡಿಭಾಗ ಕೊರ‌್ಲಕುಂಟೆ ಗ್ರಾಮದಲ್ಲಿ ಅ.10ರ ಮಂಗಳವಾರ ಬಂಡೆ ಮಾರಮ್ಮ ಜಾತ್ರೆ ಆಚರಣೆಗೊಳ್ಳಲಿದೆ.
ತಿಪ್ಪನಹಳ್ಳಿ, ಶೆಟ್ಟೂರು ಸೇರಿ ಬಹುಪಾಲು ಆಂಧ್ರ ಪ್ರದೇಶದ ಭಕ್ತರು ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಕೊರ‌್ಲಕುಂಟೆ, ವೃಂದಾವನಹಳ್ಳಿ, ಬೊಮ್ಮನಕುಂಟೆ, ಪಗಡಲಬಂಡೆ, ಪುಟ್ಲೋರಹಳ್ಳಿ ಮತ್ತಿತರ ಹಳ್ಳಿಗಳ ಗ್ರಾಮಸ್ಥರು ಮಾರಮ್ಮ ದೇವರ ಮೂರ್ತಿಗಳನ್ನು ಕಾಲ್ನಡಿಗೆಯಲ್ಲಿ ತಂದು ಗಂಗಾಪೂಜೆ ನೆರವೇರಿಸಿ, ಬಂಡೆಮಾರಕ್ಕನ ಗುಡಿಯವರೆಗೆ ಮೆರವಣಿಗೆಯಲ್ಲಿ ಕೊಂಡೊಯ್ದು ತಮ್ಮ ಕಟ್ಟೆಗಳ ಮೇಲೆ ಪ್ರತ್ಯೇಕವಾಗಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುವರು.