

ಪರಶುರಾಮಪುರ: ಕರ್ನಾಟಕ-ಆಂಧ್ರದ ಗಡಿಭಾಗ ಕೊರ‌್ಲಕುಂಟೆ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ಮಾರಮ್ಮ ಎಂದೇ ಪ್ರಸಿದ್ಧಿ ಪಡೆದಿರುವ ಗೌರಸಮುದ್ರ ಜಾತ್ರೆ ಸಡಗರಿಂದ ನಡೆಯಿತು.
ಇಲ್ಲಿನ ಪಗಡಲಬಂಡೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ 7 ಹಳ್ಳಿಗಳಲ್ಲಿನ ಮಾರಮ್ಮ ದೇವಿಯ ಮೂರ್ತಿಗಳನ್ನು ಕೊರ‌್ಲಕುಂಟೆಯ ಹೊರವಲಯದ ಬಂಡೆ ಮಾರಮ್ಮನ ಮೂಲ ಸ್ಥಾನದಲ್ಲಿ ಕರೆತಂದು ಜಾತ್ರೋತ್ಸವ ಆಚರಿಸಲಾಯಿತು.
ಆಂಧ್ರ ಗಡಿ ಗ್ರಾಮಗಳಾದ ತಿಪ್ಪನಹಳ್ಳಿ, ಶೆಟ್ಟೂರು ಸೇರಿ ಅನೇಕ ಗ್ರಾಮದ ಜನರು ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.