ಬಂಡೆ ಸಾಹೇಬ್ ಮೇ 16ರಂದು ತೆರೆಗೆ

bande saheb
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ನೈಜ ಘಟನೆ ಆಧಾರಿತ ‘ಬಂಡೆ ಸಾಹೇಬ್’ ಚಲನಚಿತ್ರ ಮೇ 16ರಂದು ತೆರೆ ಕಾಣಲಿದೆ ಎಂದು ನಿರ್ದೇಶಕ ಚಿನ್ಮಯರಾಮ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲ ವರ್ಷಗಳ ಹಿಂದೆ ಕಲಬುರಗಿಯಲ್ಲಿ ರೌಡಿಶೀಟರ್ ಮುನ್ನಾನನ್ನು ಸೆರೆ ಹಿಡಿಯುವ ಸಂದರ್ಭದಲ್ಲಿ ಶೂಟೌಟ್​ಗೆ ಬಲಿಯಾದ ಪಿಎಸ್​ಐ ಮಲ್ಲಿಕಾರ್ಜುನ ಬಂಡೆ ಅವರ ಜೀವನದ ಕಥೆ ಆಧಾರಿತ ಚಿತ್ರ ಮಾಡಿದ್ದೇವೆ. ಇದು ನನ್ನ ನಿರ್ದೇಶನದ ಮೊದಲ ಚಿತ್ರ. ಕಥೆ ಇಷ್ಟವಾಗಿ ನಿರ್ದೇಶನಕ್ಕೆ ಮುಂದಾದೆ ಎಂದು ಹೇಳಿದರು.

ನಿರ್ವಪಕ ಗೋಪಣ್ಣ ದೊಡ್ಮನಿ ಮಾತನಾಡಿ, ಪಿಎಸ್​ಐ ಮಲ್ಲಿಕಾರ್ಜುನ ಬಂಡೆ ಅವರ ಕರ್ತವ್ಯ ನಿಷ್ಠೆಯನ್ನು ಎಲ್ಲರಿಗೂ ತಿಳಿಸುವ ಉದ್ದೇಶದಿಂದ ಈ ಚಿತ್ರದ ನಿರ್ಮಾಣ ಕೈಗೆತ್ತಿಕೊಂಡಿದ್ದೇವೆ. ದುಡ್ಡು ಮಾಡಬೇಕೆಂಬ ಇರಾದೆ ಇದ್ದಿದ್ದರೆ ಬೇರೆ ಚಿತ್ರ ಮಾಡುತ್ತಿದ್ದೇವು. ಬಂಡೆ ಅವರ ಕುಟುಂಬಕ್ಕೂ ನೆರವು ನೀಡುವ ಉದ್ದೇಶ ಇದೆ ಎಂದರು.

ನಾಯಕ ನಟ ಸಂತೋಷ ರಾಮ್ ಮಾತನಾಡಿ, ನಾನು ಬಂಡೆ ಅವರ ಹಾಗೇ ಕಾಣಿಸುತ್ತೇನೆ. ನಾನು ಹಾಗೂ ವೀರಣ್ಣ ಕೊರಳ್ಳಿ 2 ತಿಂಗಳ ಕಾಲ ಕಲಬುರಗಿಯಲ್ಲೇ ಇದ್ದು ಬಂಡೆ ಅವರ ಒಡನಾಡಿಗಳನ್ನು ಸಂರ್ಪಸಿ ಮಾಹಿತಿ ಕಲೆ ಹಾಕಿದ್ದೇವೆ. ಈ ಹಿಂದೆ ಪಂಟ್ರು ಹಾಗೂ ಕೆಲ ಚಿತ್ರಗಳಲ್ಲಿ ನಟಿಸಿದ್ದೇನೆ ಎಂದು ಹೇಳಿದರು.

ನಾಯಕಿ ನಟಿ ಕಾವ್ಯ ಭರದ್ವಾಜ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net