ದಸರಾ ಮೆರವಣಿಗೆಗೆ ಗಂಡಾನೆಗಳ ತಾಲೀಮು

elephant meravanige
ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ತಾಲೀಮು ನಡೆಸಲಾಯಿತು.
Published on

ಶಿವಮೊಗ್ಗ: ದಸರಾ ಮೆರವಣಿಗೆಯಲ್ಲಿ ಭಾಗಿಯಾಗಲು ಶಿವಮೊಗ್ಗಕ್ಕೆ ಬಂದಿರುವ ಸಕ್ರೆಬೈಲ್‌ನ ಮೂರು ಗಂಡಾನೆಗಳಿಗೆ ಶನಿವಾರ ನಗರದಲ್ಲಿ ತಾಲೀಮು ನಡೆಸಲಾಯಿತು.

ಶುಕ್ರವಾರ ಸಂಜೆ ಬಾಲಣ್ಣ, ಸಾಗರ ಹಾಗೂ ಬಹದ್ದೂರ್ ಆನೆಗಳನ್ನು ಶಿವಮೊಗ್ಗಕ್ಕೆ ತರಲಾಗಿತ್ತು. ಮೂರು ಆನೆಗಳಿಗೆ ಕೋಟೆ ರಸ್ತೆ, ಗಾಂಧಿ ಬಜಾರ್, ದುರ್ಗಿಗುಡಿ ಮೂಲಕ ಮತ್ತೆ ವಾಪಾಸ್ ಕೋಟೆ ರಸ್ತೆಯ ವಾಸವಿ ಶಾಲೆ ಸಮೀಪ ಕರೆತರಲಾಯಿತು. ಆನೆಗಳಿಗೆ ನಗರದ ವಾತಾವರಣಕ್ಕೆ ಹೊಂದಾಣಿಕೆ ಮಾಡಿಸುವ ಸಲುವಾಗಿ ಬೆಳಗ್ಗೆ ತಾಲೀಮು ನಡೆಸಲಾಗಿದೆ. ಆನೆಗಳು ಸಾಗುವ ಹಾದಿಯಲ್ಲಿ ಜನರ ನಿಯಂತ್ರಣಕ್ಕೆ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ನಿಯೋಜಿಸಲಾಗಿತ್ತು. ವನ್ಯಜೀವಿ ವಿಭಾಗದ ಪಶುವೈದ್ಯ ಡಾ.ವಿನಯ್ ಕೂಡ ಜತೆಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net