

ಶಿರಸಿ: ತಾಲೂಕಿನ ಬನವಾಸಿ ಐತಿಹಾಸಿಕ ಪುರಾಣ ಪ್ರಸಿದ್ಧ ಶ್ರೀ ಉಮಾ ಮಧುಕೇಶ್ವರ ದೇವರ ಮಹಾರಥೋತ್ಸವವು ಏ. 8 ರಂದು ನಡೆಯಲಿದೆ.
ಜಾತ್ರಾ ಧಾರ್ವಿುಕ ಕಾರ್ಯಕ್ರಮ ಈಗಾಗಲೇ ಆರಂಭಗೊಂಡಿದ್ದು ಏ. 1ರಂದು ಮಹಾಗಣಪತಿ ಪೂಜೆ, ಸಂಕಲ್ಪ, 2ರಂದು ಧ್ವಜಾರೋಹಣ, ಭೇರಿತಾಡನ, ಮಹಾಬಲಿ ಮತ್ತಿತರ ಕಾರ್ಯಕ್ರಮಗಳು ನಡೆದಿವೆ.
ಏ.3ರಿಂದ 7ರವರೆಗೆ ನಿತ್ಯ ಬಲಿ, ಜಪ, ಹವನಗಳು, ಹಗಲುತ್ಸವ ತೇರು, ರಾತ್ರಿ ತಿರುಗುಣಿ ತೇರು ನಡೆಯಲಿದೆ. 7ರ ರಾತ್ರಿ ಶ್ರೀ ದೇವರ ಗಜ ಯಂತ್ರೋತ್ಸವ (ಹೂವಿನ ರಥೋತ್ಸವ )ನಡೆಯಲಿದ್ದು, 8ರಂದು ಶ್ರೀ ಮನ್ಮಹಾಸ್ಯಟದನೋತ್ಸವ (ದೊಡ್ಡತೇರು )ನಡೆಯಲಿದೆ. 9ರಂದು ಕುಂಕುಮೋತ್ಸವ, 10ರಂದು ಅವಬ್ರತ ತೀರ್ಥಸ್ನಾನದೊಂದಿಗೆ ಜಾತ್ರಾ ವಿಧಿ ವಿಧಾನ ಸಂಪನ್ನಗೊಳ್ಳಲಿದೆ ಎಂದು ದೇವಸ್ಥಾನದ ಆಡಳಿತಾಧಿಕಾರಿ ಗ್ರೇಡ್-2 ತಹಸೀಲ್ದಾರ್ ರಮೇಶ ಬಿ. ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.