

ಶಿರಸಿ: ತಾಲೂಕಿನ ಬನವಾಸಿ ಉಮಾ ಮಧುಕೇಶ್ವರ ದೇವರ ಮಹಾ ರಥೋತ್ಸವ ಏ. 18ರಂದು ನೆರವೇರಲಿದೆ.
ಈ ಪ್ರಯುಕ್ತ ಏ. 11ರಿಂದ ಗಣಪತಿ ಪೂಜೆಯೊಂದಿಗೆ ಜಾತ್ರಾ ವಿಧಿ ವಿಧಾನಗಳು ಆರಂಭಗೊಂಡಿದ್ದು, ಶುಕ್ರವಾರ ಧ್ವಜಾರೋಹಣ, ಯಾಗಶಾಲಾ ಪ್ರವೇಶ, ಕೌತುಕ ಬಂಧನ, ಶಿಭಿಕಾ ಯಂತ್ರೋತ್ಸವ ನೆರವೇರಿದೆ. 13ರಿಂದ 17ರವರೆಗೆ ಪ್ರತಿನಿತ್ಯ ಬಲಿ, ಜಪ, ಹವನಗಳು, ಸಾಯಂಕಾಲ ಹಗಲುತ್ಸವ ತೇರು ಮತ್ತು ತಿರುಗುಣಿ ತೇರು ಜರುಗಲಿವೆ. 17ರ ರಾತ್ರಿ ಗಜ ಯಂತ್ರೋತ್ಸವ (ಹೂವಿನ ತೇರು )ಜರುಗಲಿದೆ. 18 ಮಹಾರಥೋತ್ಸವ (ದೊಡ್ಡ ತೇರು ) ಜರುಗುತ್ತದೆ ಎಂದು ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.