ಬನವಾಸಿ ಕದಂಬೋತ್ಸವ ಏ. 12ರಿಂದ

SIRASI KADAMBOSTVA
Published on

ಶಿರಸಿ: ಕನ್ನಡಿಗರ ಮೊದಲ ರಾಜಧಾನಿ, ಬನವಾಸಿಯ ವಿಶೇಷತೆಗಳನ್ನು ನಾಡಿಗೆ ತಿಳಿಸುವ ಹಬ್ಬ ಕದಂಬೋತ್ಸವಕ್ಕೆ ದಿನಾಂಕ ನಿಗದಿಯಾಗಿದೆ. ಏ. 12 ಮತ್ತು 13ರಂದು ಆಚರಣೆ ಮಾಡಲು ನಿರ್ಧರಿಸಲಾಗಿದೆ.

ನಗರದ ಮಿನಿ ವಿಧಾನಸೌಧಲ್ಲಿ ಶನಿವಾರ ಕರೆಯಲಾಗಿದ್ದ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಶಾಸಕ ಶಿವರಾಮ ಹೆಬ್ಬಾರ, ಭೀಮಣ್ಣ ನಾಯ್ಕ ದಿನಾಂಕ ನಿಗದಿಪಡಿಸಿದರು. ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಕದಂಬೋತ್ಸವದ ದಿನಾಂಕ ಪ್ರಕಟಿಸಿದರು.

ಬಳಿಕ ಸಭೆಗೆ ಮಾಹಿತಿ ನೀಡಿದ ಶಾಸಕ ಶಿವರಾಮ ಹೆಬ್ಬಾರ್, ’ಎರಡು ದಿನ ಕದಂಬೋತ್ಸವ ನಡೆಯಲಿದೆ. ಇದಕ್ಕೆ ಪೂರಕವಾಗಿ ಏ.10ರಂದು ಗುಡ್ನಾಪುರ ರಾಣಿ ನಿವಾಸದಲ್ಲಿ ಕದಂಬ ಜ್ಯೋತಿಗೆ ಚಾಲನೆ ನೀಡಲಾಗುವುದು. ಇದರ ಭಾಗವಾಗಿ ಗುಡ್ನಾಪುರ ಉತ್ಸವ ಕೂಡ ನಡೆಸಲಾಗುವುದು. ಎರಡು ದಿನ ವಿವಿಧ ಕಡೆ ಸಂಚರಿಸಿ ಬನವಾಸಿಗೆ ಆಗಮಿಸುವ ಕದಂಬ ಜ್ಯೋತಿಯಿಂದ ಕದಂಬೋತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡುವರು. ಅದೇ ವೇದಿಕೆಯಲ್ಲಿ ಸಾಹಿತಿ ಬಿ.ಎ. ವಿವೇಕ ರೈ ಅವರಿಗೆ ‘ಪಂಪ ಪ್ರಶಸ್ತಿ’ ಪ್ರದಾನ ಮಾಡಲಾಗುವುದು’ ಎಂದರು.

ಉತ್ಸವದ ಅಂಗವಾಗಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ, ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಉಪವಿಭಾಗಾಧಿಕಾರಿ ಕೆ.ವಿ. ಕಾವ್ಯಾರಾಣಿ, ನಗರಸಭೆ ಅಧ್ಯಕ್ಷೆ ಶರ್ವಿುಳಾ ಮಾದನಗೇರಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net