ಬಾಣಾವರದ ಶ್ರೀ ಕೃಷ್ಣ ಯೋಗೀಂದ್ರರ ಸನ್ನಿಧಾನದಲ್ಲಿ ಬಾಲಸಂಸ್ಕಾರ ಶಿಬಿರ

14 Rural ARASI- Banavara
Published on

ಅರಸೀಕೆರೆ ಗ್ರಾಮಾಂತರ : ಮಕ್ಕಳಿಗೆ ಎಳವೆಯಲ್ಲೇ ನಮ್ಮ ಸಂಸ್ಕೃತಿ,ಅಚಾರ, ವಿಚಾರ, ಆಚರಣೆ ಮತ್ತು ಸಂಸ್ಕಾರಗಳನ್ನು ಕಲಿಸಿಕೊಟ್ಟರೆ ಭವಿಷ್ಯದ ಯುವ ಪೀಳಿಗೆ ಸನ್ಮಾರ್ಗದಲ್ಲಿ ಸಾಗುತ್ತದೆ ಎಂದು ಮುಖಂಡ ಲಿಕ್ಮೀಚಂದ್ ಹೇಳಿದರು.

ಬಾಣಾವರದ ಹುಳಿಯಾರು ರಸ್ತೆಯಲ್ಲಿ ಇರುವ ಶ್ರೀ ಕೃಷ್ಣ ಯೋಗೀಂದ್ರ ಗುರುಗಳು ಸನ್ನಿಧಾನದಲ್ಲಿ ಸಂಸ್ಕಾರ ಭಾರತಿ

ಹಮ್ಮಿಕೊಂಡಿದ್ದ ಬಾಲಸಂಸ್ಕಾರ- ಬೇಸಿಗೆ ಶಿಬಿರದಲ್ಲಿ ಮಾತನಾಡಿದರು. ಒಂದು ವಾರದಿಂದ ಶಿಬಿರದಲ್ಲಿ ಮಕ್ಕಳಿಗೆ ವಿವಿಧ ಶ್ಲೋಕ, ವಚನ, ಚಿತ್ರಕಲೆ, ರಂಗೋಲಿ, ನಾಟಕ, ರಸಪ್ರಶ್ನೆ- ಹೀಗೆ ಹತ್ತು ಹಲವು ಕಾರ್ಯಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಇದು ಶ್ಲಾಘನೀಯ ಎಂದರು. ಸಂಸ್ಕಾರ ಭಾರತಿ ಸಂಘಟನೆ ದೇಶದ ವಿವಿಧ ಕಡೆ ಈ ರೀತಿಯ ಶಿಬಿರ ಆಯೋಜಿಸುತ್ತಿದೆ. ಶಿಬಿರದಲ್ಲಿ ಮಕ್ಕಳು ವಿವಿಧ ಕಲೆಗಳ ಸದುಪಯೋಗವನ್ನು ಪಡೆದುಕೊಳ್ಳಬೇಕು. ಇದು ಜೀವನದ ಪ್ರಗತಿಗೆ ಸಹಕಾರಿ ಎಂದರು. ಆಯೋಜನಕರಾದ ಜಯಂತಿ, ಸಹನಾ, ಗೌರಿ, ಶ್ರೀನಿವಾಸ ಮತ್ತು ರೇಣುಕಾ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net