ರೈತರ ಅಭಿವೃದ್ಧಿಗೆ ಶ್ರಮಿಸುತ್ತಿದೆ ಬಾಣಾವರ ಪ್ಯಾಕ್ಸ್

ph,01,ASK,G, ಬಾಣಾವರ ಸಹಾಕಾರ ಕೃಷಿ ಪತ್ತಿನ ಬ್ಯಾಂಕ್
ಅರಸೀಕೆರೆ ಗ್ರಾಮಾಂತರ ತಾಲೂಕಿನ ಬಾಣಾವರ ಪಟ್ಟಣದ ಕೃಷಿ ಪತ್ತಿನ ಸಹಕಾರ ಬ್ಯಾಂಕ್‌ನ ವಾರ್ಷಿಕ ಮಹಾಸಭೆಯನ್ನು ಗಣ್ಯರು ಉದ್ಘಾಟಿಸಿದರು. ಕೃಷ್ಣಮೂರ್ತಿ, ಶ್ರೀನಿವಾಸ್, ಅಶೋಕ್, ರವಿಶಂಕರ್, ಶ್ರೀಧರ್, ಲಕ್ಷ್ಮೀ, ಜಯಣ್ಣ, ಆರೀಫ್ ಜಾನ್, ಪರಮೇಶ್, ಲಕ್ಷ್ಮೀಶ ಹಾಜರಿದ್ದರು.
Published on

ಅರಸೀಕೆರೆ ಗ್ರಾಮಾಂತರ: ತಾಲೂಕಿನ ಬಾಣಾವರ ಪಟ್ಟಣದ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರೈತರಿಗೆ ಹಲವಾರು ರೀತಿಯಲ್ಲಿ ಸಹಕರಿಸುತ್ತಾ ರೈತರ ಅಭಿವೃದ್ಧಿಗೆ ಶ್ರಮಿಸುತ್ತ ಬಂದಿದೆ. ಇದರ ಸದುಪಯೋಗವನ್ನು ಎಲ್ಲ ರೈತರು ಪಡೆದುಕೊಳ್ಳಬೇಕು ಎಂದು ಸಂಘದ ಅಧ್ಯಕ್ಷ ಆರಿಫ್ ಜಾನ್ ತಿಳಿಸಿದರು.

ಪಟ್ಟಣದ ಸರ್ಕಾರಿ ಆಸ್ಪತ್ರೆ ರಸ್ತೆಯಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಟಿ.ಆರ್.ಕೃಷ್ಣಮೂರ್ತಿ ಮಾತನಾಡಿ, ಸಹಕಾರಿ ಸಂಘದಿಂದ ರೈತರಿಗೆ ರಸಗೊಬ್ಬರ ವಿತರಣೆ ಮಾಡುವಾಗ ಸಂಘದ ಸದಸ್ಯರಿಗೆ ಸರಿಯಾದ ರೀತಿಯಲ್ಲಿ ಗೊಬ್ಬರ ದೊರಕಿಲ್ಲ. ಇದಕ್ಕೆ ಕಾರಣ ಬಾಣಾವರ ಹೋಬಳಿಯು ದೊಡ್ಡ ಕೇಂದ್ರವಾಗಿದ್ದು ಬಾಣಾವರ ಕೃಷಿಪತ್ತಿನ ಸಹಕಾರ ಸಂಘದಲ್ಲಿ ಮಾತ್ರ ಗೊಬ್ಬರವನ್ನು ತರಿಸಿ ರೈತರಿಗೆ ವಿತರಿಸಲಾಗುತ್ತಿದೆ. ಆದರೆ ಅಕ್ಕ ಪಕ್ಕದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಬೆಂಡೆಕೆರೆ, ಕಾಚಿಘಟ್ಟ, ಬೈರಗೊಂಡನಹಳ್ಳಿ, ಶಾನೇಗೆರೆಗಳಲ್ಲಿಯೂ ಸಹ ಕೃಷಿಪತ್ತಿನ ಸಹಕಾರಗಳು ಸಂಘಗಳಿದ್ದು ಅವರು ಕೂಡ ಗೊಬ್ಬರವನ್ನು ತರಿಸಿ ರೈತರಿಗೆ ವಿತರಣೆ ಮಾಡುವುದರಿಂದ ಎಲ್ಲ ರೈತರಿಗೂ ಅನುಕೂಲವಾಗುತ್ತದೆ ಎಂದರು.

ಅರಸೀಕೆರೆ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಸಿ.ಶ್ರೀನಿವಾಸ್ ಮಾತನಾಡಿದರು. ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯದರ್ಶಿ ಟಿ.ಎಚ್. ರಾಜಪ್ಪ, ಬಗುರ್ ಹುಕುಂ ಕಮಿಟಿ ಸದಸ್ಯ ಬಿ.ಎಂ.ಜಯಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೀಣಾ ವಿಶ್ವನಾಥ್, ಟಿ. ಜಿ. ಚಂದ್ರಪ್ಪ, ಬಿ. ರವಿಶಂಕರ್, ಬಿ.ಆರ್. ಸುರೇಶ್, ಬೈರಾಪುರ ರಮೇಶ್,ಬಸವರಾಜು, ಜೆಡಿಎಸ್ ಮುಖಂಡ ಬಿ. ಎಸ್. ಅಶೋಕ್, ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಪರಮೇಶ್, ಬಿ.ಆರ್. ಲಕ್ಷ್ಮೀಶ್, ಕಾರ್ಯದರ್ಶಿ ರಾಜಪ್ಪ, ಸಹ ಕಾರ್ಯದರ್ಶಿ ವೀಣಾ, ಗುಮಾಸ್ತರಾದ ಎಸ್. ರೇಖಾ, ಕುಮಾರಸ್ವಾಮಿ, ಸಹಾಯಕರಾದ ಶ್ರೀನಿವಾಸ್, ಸಂಘದ ಸರ್ವ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net