

ಅರಸೀಕೆರೆ ಗ್ರಾಮಾಂತರ : ವ್ಯಕ್ತಿ ಎಂದು ಶಾಶ್ವತವಲ್ಲ ಮನುಜ ತಾನು ಜನನದ ನಂತರ ಸಮಾಜಕ್ಕೆ ಏನು ಒಳಿತು ಮಾಡುತ್ತಾನೋ ಅದು ಮುಖ್ಯ. ಆಗ ಅವನ ಹೆಸರು ಕೊಂಡಾಡುತ್ತಾರೆ ಎಂದು ಪಾಂಡುವಮಟ್ಟಿ ಮಠದ ಶ್ರೀ ಗುರು ಬಸವ ಸ್ವಾಮೀಜಿ ಹೇಳಿದರು.
ತಾಲೂಕಿನ ಬಾಣಾವರ ಹೋಬಳಿಯ ತೊಂಡಿಗನಹಳ್ಳಿ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಬಸವ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಭಾಗದಲ್ಲಿ ಒಂದು ಜ್ಞಾನ ಹಾಗೂ ವಚನದ ಝೇಂಕಾರ ಮೂಳಗಿಸಲು ಒಂದು ಬಸವ ಮಂಟಪ ವಶ್ಯವಿದೆ. ದಾನಿಗಳು ನಿಸ್ವಾರ್ಥದಿಂದ ಸಹಕರಿಸಬೇಕು ಎಂದರು. ಮಾಡಾಳು ವಿರುಕ್ತ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ಮಾತನಾಡಿ, 12ನೇ ಶತಮಾನದ ಬಸವಣ್ಣನವರ ವಿಚಾರಧಾರೆ ಜಗತ್ತಿನಾದ್ಯಂತ ಪರಿಸರಿಸಿರುವುದರಿಂದ ದಯೆ ಇಲ್ಲದ ಧರ್ಮ ಯಾವುದಯ್ಯ ದಯೆವೇ ಬೇಕು ಸಕಲ ಪ್ರಾಣಿಗಳಲ್ಲಿ ಎಂಬ ಹಾಗೆ ಮನುಜ ತನ್ನ ಜೀವಿತಾವಧಿಯಲ್ಲಿ ಉತ್ತಮ ಕಾರ್ಯಗಳನ್ನು ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ಜಯ ಚಂದ್ರಶೇಖರ ಸ್ವಾಮೀಜಿ, ಅರಸೀಕೆರೆ ಯಳೆನಾಡು ಮಠದ ಶ್ರೀ ಜ್ಞಾನ ಪ್ರಭುಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ,
ಆಶೀರ್ವಚನ ನೀಡಿದರು. ಇದೇ ವೇಳೆ ಪ್ರತಿಭಾ ಪುರಸ್ಕಾರ ಮತ್ತು ವಚನ ಗಾಯನ ಜರುಗಿತು. ತಾಪಂ ಮಾಜಿ ಸದಸ್ಯ ಕೃಷ್ಣಮೂರ್ತಿ, ಚಿಕ್ಕ ಮಂಗಳೂರು ಗಂಗಾಧರ್ ಶಿವಪುರ್ ಹಾಗೂ ಸಂತೆಬೆನ್ನೋರು ನಾಗರಾಜ್ , ಯಮುನ ಮೋಹನ್ ಇತರರು ಇದ್ದರು.