

ಅರಸೀಕೆರೆ ಗ್ರಾಮಾಂತರ :- ಬಾಣಾವರ ಹೋಬಳಿಯ ಶಾನೆಗೆರೆ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನವು ತೆರವಾಗಿದ್ದ ಹಿನ್ನೆಲೆಯಲ್ಲಿ ಎತ್ತಿನ ಮನೆ ಜಯರಾಮ್ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರವನ್ನು ಸಲ್ಲಿಸಿದರು ವಿರೋಧವಾಗಿ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಕಾರಣ ಶಾನಗೆರೆ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಎತ್ತಿನ ಮನೆ ಜಯರಾಮ್ ರವರನ್ನು ಆಯ್ಕೆ ಪ್ರಕ್ರಿಯೆ ಯನ್ನು ಚುನಾವಣಾ ಅಧಿಕಾರಿ ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಸತೀಶ್ ತಿಳಿಸಿದರು,
ನಂತರ ಎಲ್ಲಾ ಗ್ರಾಮ ಪಂಚಾಯಿತಿಯ ಸದಸ್ಯರುಗಳು ನೂತನ ಅಧ್ಯಕ್ಷರಿಗೆ ಪುಷ್ಪಮಾಲೆಯನ್ನು ಹಾಕಿ ಶುಭ ಕೋರಿ ನಂತರ
ಮಾನ್ಯ ಗೃಹ ಮಂಡಳಿಯ ಅಧ್ಯಕ್ಷರ ಹಾಗೂ ಶಾಸಕ ಶಿವಲಿಂಗೇಗೌಡ ಪುಷ್ಪಮಾಲೆಯನ್ನು ಹಾಕಿ ಶುಭಕೋರಿ ಮಾತನಾಡಿದ ಅವರು ಎಲ್ಲ ಸದಸ್ಯರನ್ನು ಸ್ನೇಹದಿಂದ ಬಳಸಿಕೊಂಡು ಗ್ರಾಮ ಪಂಚಾಯಿತಿಯ ಅಭಿವೃದ್ಧಿಗೆ ಶ್ರಮಿಸಬೇಕು ಜನನಾಯಕರಾಗಿ ಆಯ್ಕೆಯಾಗುವುದು ಅಷ್ಟು ಸುಲಭದ ಮಾತಲ್ಲ ಇದೊಂದು ಉತ್ತಮ ಅವಕಾಶ ಎಂದು ತಿಳಿದು ಜನಸೇವೆ ಮಾಡುವಲ್ಲಿ ಯಶಸ್ವಿಯಾಗಬೇಕು ಎಂದು ತಿಳಿಸಿದರು,